ಪೈರಸಿ ಪ್ರಕರಣದ ತನಿಖೆಗೆ ಸಂಸದರ ಆಗ್ರಹ

0
438

 
ಮಂಗಳೂರು ಪ್ರತಿನಿಧಿ ವರದಿ
ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಪೈರಸಿ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ‘ದಬಕ್ ದಬಾ ಐಸಾ’ ತುಳು ಚಿತ್ರ ಬಿಡುಗಡೆಗೆ ಮೊದಲೇ ಪೈರಸಿ ರೂಪದಲ್ಲಿ ಹೊರಬಂದಿರುವ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ನಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
 
 
ತುಳು ಸಂಸ್ಕೃತಿ , ಭಾಷೆ ಬೆಳವಣಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ತುಳು ಚಿತ್ರರಂಗಕ್ಕೆ ಇಂತಹ ಆಪತ್ತು ಬರುವುದು ಆತಂಕದ ವಿಚಾರವಾಗಿದೆ. ಇಂತಹ ಪ್ರವೃತ್ತಿಯನ್ನು ಆರಂಭದಲ್ಲಿಯೇ ನಿಲ್ಲಿಸಲು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಂಸದರ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here