'ಪೈಕೇರ ಕಪ್-2017' ಕ್ರಿಕೆಟ್ ಹಬ್ಬಕ್ಕೆ ಏ.21 ರಂದು ಚಾಲನೆ

0
646

ನ್ಯೂಸ್ ಬ್ಯುರೋ ವಾರ್ತೆ.ಕಾಂ
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹಾಗೂ ಬಿಳಿಗೇರಿಯ ಪೈಕೇರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಇದೇ ಏ.21 ರಿಂದ ಮೇ 7ರವರೆಗೆ ‘ಪೈಕೇರ ಕಪ್-2017’ ಕ್ರಿಕೆಟ್ ಹಬ್ಬ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷರಾದ ಪೈಕೇರ ಮನೋಹರ್ ಮಾದಪ್ಪ ಪಂದ್ಯಾವಳಿ ಆಯೋಜನೆಯ ಜವಾಬ್ದಾರಿಯನ್ನು ಯುವ ವೇದಿಕೆ ವಹಿಸಿಕೊಂಡ ನಂತರ ನಾಲ್ಕನೇ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಮೂಲಕ ನಡೆಯುತ್ತಿದ್ದ ಪಂದ್ಯಗಳು ಸೇರಿ ಇದು 18 ನೇ ಪಂದ್ಯಾವಳಿ ಎಂದು ತಿಳಿಸಿದರು.
ವೇದಿಕೆ ವತಿಯಿಂದ ಈ ಹಿಂದೆ ಬಾಳಾಡಿ ಕಪ್, ಉಳುವಾರನ ಕಪ್, ಕುಟ್ಟನ ಕಪ್ಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಕಳೆದ ಸಾಲಿನ ಕುಟ್ಟನ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 182 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 200ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಪಂದ್ಯಾವಳಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಿಕೊಂಡು ಅಗತ್ಯ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
 ಮಹಿಳಾ ಕಬಡ್ಡಿ ಆಕರ್ಷಣೆ 
ಈ ಬಾರಿ ವಿಶೇಷವಾಗಿ ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮನೋಹರ್ ಮಾದಪ್ಪ ತಿಳಿಸಿದರು.
ವೇದಿಕೆಯ ಪ್ರಮುಖರಾದ ಪುದಿಯನೆರವನ ರಿಷಿತ್ ಮಾತನಾಡಿ, ತಂಡಗಳ ನೋಂದಣಿ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಆಸಕ್ತ ತಂಡಗಳು ಪುದಿಯನೆರವನ ರಿಷಿತ್ ಮೊ.9972376151, ಪ್ರಸಾದ್ ಅಚ್ಚಲ್ಪಾಡಿ ಮೊ.9481770780, ಮನೋಜ್ ಮೂಲೆಮಜಲು ಮೊ.9483111134, ಗಗನ್ ಪೈಕೇರ ಮೊ.9483487901 ಇವರನ್ನು ಸಂಪರ್ಕಿಸಬಹುದು ಎಂದರು. ಹೆಸರು ನೋಂದಾವಣೆಗೆ ಏ.10 ಕೊನೆಯ ದಿನವಾಗಿದೆ.
ಸುದ್ದಿಗೊಷ್ಠಿಯಲ್ಲಿ ವೇದಿಕೆ ಕಾರ್ಯದರ್ಶಿ ರೋಷನ್ ಕಟ್ಟೆಮನೆ, ಪೈಕೇರ ಕುಟುಂಬದ ಖಜಾಂಚಿ ಪೈಕೇರ ನಂದ ಅಪ್ಪಯ್ಯ, ಬಾಳಾಡಿ ಮನೋಜ್ ಹಾಗೂ ಯಾಲದಾಳು ಹರೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here