ಪೇಟೆಯಲ್ಲಿ ಸಂಚಲನ ಮೂಡಿಸಿದ ರವೀಶ 

0
301

 
ಚಿತ್ರ ವರದಿ : ಶ್ಯಾಮಪ್ರಸಾದ ಸರಳಿ, ಬದಿಯಡ
ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ರವೀಶ ತಂತ್ರಿಯವರು ಶುಕ್ರವಾರದಂದು ಚೆರ್ಕಳ ಪೇಟೆಯಲ್ಲಿ ಮತಯಾಚಿಸಿ ಚೆರ್ಕಳ ಪೇಟೆಯಲ್ಲಿ ಸಂಚಲನ ಮೂಡಿಸಿದರು.
 
badiyakdka-cherkala1
 
ಈ ಸಂದರ್ಭದಲ್ಲಿ ಪಕ್ಷದ ನೇತಾರರಾದ ಕಾಸರಗೋಡು ಮಂಡಲ ಬಿಜೆಪಿ ಅಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ ನಾರಂಪಾಡಿ, ಬಿಜೆಪಿ ಚೆಂಗಳ ಪಂ. ಅಧ್ಯಕ್ಷ ಪ್ರಭಾಕರ ಎಂ.ಕೆ., ಮೋಹನ್ ಶೆಟ್ಟಿ, ಮಹಿಳಾ ಮೋರ್ಚಾದ ನೇತಾರರಾದ ಶಕುಂತಳ, ಸುಜಾತ ಮಾಲಂಗೈ, ಸುಜಾತ ಆರ್ ತಂತ್ರಿ, ಅನೂಪ್ ಮವ್ವಾರು, ಮೊದಲಾದವರು ಜತೆಗಿದ್ದರು.
 
 
ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಈ ಕ್ಷೇತ್ರದಲ್ಲಿ ಕುಲಕ್ಷಕಾರಣಗಳಿಗಾಗಿ ನಿರಂತರವಾಗಿ ನಡೆಯುವ ಕೋಮುಗಲಭೆಗಳನ್ನು ಕೊನೆಗೊಳಿಸಲು ಎನ್.ಡಿ.ಎ ಅಭ್ಯಥಿಗೆ ಮತ ನೀಡಿ ವಿಜಯಗೊಳಿಸಬೇಕೆಂದು ವಿನಂತಿಸಿದರು.
 
 
 
ವ್ಯಾಪಾರಿ ಬಂಧುಗಳಿಂದ ಮತ್ತು ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಚೆರ್ಕಳ ನಗರವು ಮತ ಸೌರ್ಹಾದತೆಗೆ ಸಾಕ್ಷಿಯಾಗಿತ್ತು. ಮತದಾರರಿಂದ ಉತ್ತಮ ಸ್ಪಂದನೆಯು ಲಭಿಸಿದವು.

LEAVE A REPLY

Please enter your comment!
Please enter your name here