ಪೆಸರೆಟ್ಟು

0
363

ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥ: 
ಹೆಸರು ಕಾಳು ಕಾಲು ಕೆ.ಜಿ., ಅಕ್ಕಿ ಹಿಟ್ಟು 100 ಗ್ರಾಂ., ಈರುಳ್ಳಿ ಕಾಲು ಕೆ.ಜಿ., ಕ್ಯಾರೆಟ್ 2, ಜೀರಿಗೆ 2 ಚಮಚ, ಕೊತ್ತಂಬರಿ ಸೊಪ್ಪು 1 ಕಪ್, ಕರಿಬೇವು ಸ್ವಲ್ಪ. ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ 3-4.
 
 
 
ಹೇಗೆ ತಯಾರಿಸುವುದು:
ಮೊದಲಿಗೆ ಹೆಸರುಕಾಳನ್ನು ರಾತ್ರಿಯೇ ನೆನಸಿಕೊಳ್ಳಬೇಕು (6-7 ಗಂಟೆ ಕಾಲ) ಮರುದಿನ ಹೆಸರುಕಾಳನ್ನು ನೀರು ಬಸಿದು, ಹಸಿ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಅಕ್ಕಿ ಹಿಟ್ಟು, ಕೊತ್ತಂಬರಿ, ಕರಿಬೇವು, ಜೀರಿಗೆ ಎಲ್ಲಾ ಹಾಕಿ ಚೆನ್ನಾಗಿ ಕಲಸಿಡಿ. 1 ತಾಸು ನೆನೆಯಲು ಬಿಡಿ. ಒಲೆಯ ಮೇಲೆ ಕಾವಲಿ ಕಾಯಲು ಹಾಕಿ ಎಣ್ಣೆ ಹಾಕಿ, ಹಿಟ್ಟನ್ನು ತೆಳುವಾಗಿ ಕಾವಲಿಯ ಮೇಲೆ ಹರಡಿ, ಎರಡೂ ಕಡೆ ಚೆನ್ನಾಗಿ ಸುಡಿ (ತುಪ್ಪದೊಂದಿಗೆ ದೋಸೆಯನ್ನು ಸುಟ್ಟರೆ ಹೆಚ್ಚಿನ ರುಚಿ)

LEAVE A REPLY

Please enter your comment!
Please enter your name here