ಪೆರಿಂಜೆ ನಾಗರೀಕರೇ…ಎಚ್ಚರ ಎಚ್ಚರ…

0
3200


ಪೆರಿಂಜೆ: ಬೆಳ್ತಂಗಡಿ ತಾಲೂಕಿನ ಕಟ್ಟ ಕಡೆಯ ಗ್ರಾಮ `ಹೊಸಂಗಡಿ-ಬಡಕ್ಕೋಡಿ’ ಹೌದು…ಇದೀಗ ಮಾರಕ ಕೊರೊನಾ ಖಾಯಿಲೆ ಈ ಗ್ರಾಮಕ್ಕೆ ವಕ್ಕರಿಸಿದೆ. ಬಡಕ್ಕೋಡಿಯ ಆಶಾ ಕಾರ್ಯಕರ್ತೆಯೋರ್ವರು ಇದೀಗ ಕೊರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆ ಭಾಗದ ಜನತೆ ಅಕ್ಷರಶಃ ಚಿಂತೆಗೀಡಾಗಿದ್ದಾರೆ.
ಆಶಾ ಕಾರ್ಯಕರ್ತೆಯವರು ಓಡಾಡಿದ ಮನೆಗಳಲ್ಲಿರುವವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇನ್ನಷ್ಟೇ ವರದಿ ಬರಬೇಕಾಗಿದೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಗ್ರಾಮೀಣ ಭಾಗದಲ್ಲೂ ವಕ್ಕರಿಸಿದ್ದು ಜನತೆ ಚಿಂತೆಗೀಡಾಗುವಂತೆ ಮಾಡಿದೆ.
ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಇದ್ದ ಜನತೆ ಇದೀಗ ತಲೆಮೇಲೆ ಕೈ ಹೊತ್ತುಕೊಳ್ಳುವಂತಹ ಸ್ಥಿತಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here