ಪೆರಡಾಲ ವಲಯ ಸಭೆ

0
568

 
ವರದಿ-ಚಿತ್ರ: ಗೋವಿಂದ ಬಿಜಿ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆಯುವ ಪೆರಡಾಲ ವಲಯ ಸಭೆಯು ವಲಯ ಉಪಾಧ್ಯಕ್ಷರಾದ ವ್ಯಾಸ ಪ್ರಸಾದ, ಕೇರ ಇವರ ಮನೆಯಲ್ಲಿ ಜರಗಿತು.
 
 
ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಕೃಷ್ಣ ಭಟ್ ಮಡಿಪ್ಪು, ಗತ ಸಭೆಯ ವರದಿ ಮಂಡಿಸಿದರು. ಗೋಚಾತುರ್ಮಾಸ್ಯದ ಆಮಂತ್ರಣ ಹಾಗೂ ಆದಿತ್ಯಹೃದಯಮ್ ಪ್ರತಿ ಮನೆ ಮನಗಳಲ್ಲಿ ತಲುಪಿಸಲು ತೀರ್ಮಾನಿಸಲಾಯಿತು.
 
 
ವಲಯ ವಿದ್ಯಾವಿಭಾಗ ಪ್ರಧಾನರಾದ ವೆಂಕಟ್ರಮಣ ಭಟ್, ಪೆರ್ಮುಖ ಇವರು ವಿದ್ಯಾ ಸಹಾಯ ನಿಧಿ ನೀಡಿದರು. ಅನುಶ್ರೀ, ಪಟ್ಟಾಜೆ ಎಸ್.ಎಸ್.ಯಲ್.ಸಿ ಯಲ್ಲಿ 94.72% ಹಾಗೂ ಕು.ಶ್ರದ್ಧಾ, ಮಡಿಪ್ಪು ಪ್ಲಸ್-ಟು ವಿನಲ್ಲಿ 99.8% ಅಂಕ ಗಳಿಸಿರುತ್ತಾರೆ.
 
 
ಹಿರಿಯರಾದ ರಾಮ ಭಟ್, ಮೀಸೆಬೈಲು ಇವರಿಬ್ಬರಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು. ಪದಾಧಿಕಾರಿಗಳ ಪುನರ್-ರಚನೆಗೆ ರೂಪೀಕರಣದ ಬಗ್ಗೆ ವಿಷಯ ಮಂಡಿಸಲಾಯಿತು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here