ಪೆರಡಾಲ ಚತುರ್ವೇದ ಕಲಶಾಭಿಷೇಕ 16ನೇ ದಿನ

0
334

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಲೋಕಕಲ್ಯಾಣಾರ್ಥ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆದುಬರುತ್ತಿರುವ ಚತುರ್ವೇದ ಕಲಶಾಭಿಷೇಕ ಸಮಾರಂಭವು 16ನೇ ದಿನಕ್ಕೆ ಕಾಲಿಟ್ಟಿದೆ.
 
 
 
ವೃಶ್ಚಿಕ ಮಾಸ ವಿಶೇಷ ಸೇವೆಯಾಗಿ ನಡೆದುಬರುತ್ತಿರುವ ಈ ಕಾರ್ಯಕ್ರಮವು ನವಂಬರ್ 16ರಂದು ಋಗ್ವೇದ ಪಾರಾಯಣದೊಂದಿಗೆ ಆರಂಭಗೊಂಡಿತು. ನ.23ರಿಂದ ವೇದಮೂರ್ತಿಗಳಾದ ಶಿವಪ್ರಸಾದ ಭಟ್ ಪೆರಡಾಲ ಹಾಗೂ ರವಿಕುಮಾರ್ ಭಟ್ ಕಡುಮನೆ ಅವರು ಯಜುರ್ವೇದ ಪಾರಾಯಣ ನಡೆಸಿಕೊಟ್ಟರು.
 
 
 
ನ.30ರಿಂದ ಸಾಮವೇದ ಪಾರಾಯಣ ಆರಂಭಗೊಂಡಿದ್ದು ವೇದಮೂರ್ತಿಗಳಾದ ಅನಂತಕೃಷ್ಣ ಭಟ್ ಮತ್ತು ಶ್ಯಾಮಪ್ರಕಾಶ ಶಾಸ್ತ್ರಿ ಅವರು ಪಾರಾಯಣ ನಡೆಸುತ್ತಿದ್ದಾರೆ. ನೂರಾರು ಮಂದಿ ಭಕ್ತರು ದಿನನಿತ್ಯ ಭಾಗವಹಿಸುತ್ತಿದ್ದಾರೆ. ದ.7ರಿಂದ 13ರ ತನಕ ಅಥರ್ವವೇದ ಪಾರಾಯಣ ನಡೆಯಲಿದ್ದು 13ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here