ಪೆರಡಾಲದಲ್ಲಿ ಭಾಗವತ ಸಪ್ತಾಹ 2ನೇ ದಿನ

0
164

 
ಚಿತ್ರ ವರದಿ : ಶ್ಯಾಮಪ್ರಸಾದ ಸರಳಿ, ಬದಿಯಡ
ನಾನು ನನ್ನದು ಎಂಬುದನ್ನು ಬಿಟ್ಟುಬಿಡಿ – ವೇ.ಮೂ. ಮುರಳೀಕೃಷ್ಣ ಭಟ್ ಕಾಂಚನ
ಮನುಜರು ಪರೋಪಕಾರಿಯಾಗಿರಬೇಕು, ನಾನು ನನ್ನದು ಎಂಬುದನ್ನು ಬಿಟ್ಟರೆ ನಮಗೆ ಶ್ರೇಯಸ್ಸು ಲಭಿಸುತ್ತದೆ ಎಂದು ವೇ.ಮೂ. ಮುರಳೀಕೃಷ್ಣ ಭಟ್ ಕಾಂಚನ ನುಡಿದರು.
 
 
ಅವರು ಶುಕ್ರವಾರ ಸಂಜೆ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದ ಎರಡನೇ ದಿನದ ಕಥಾಪ್ರವಚನದ ಸಂದರ್ಭ ನುಡಿದರು. ಪ್ರಧಾನ ಪಾರಾಯಣ ಭಾಗಗಳಾದ ಕಪಿಲಾವತಾರ, ಕಪಿಲೋಪದೇಶ, ದಕ್ಷಯಜ್ಞ, ಧ್ರುವ ಚರಿತ್ರೆ, ಪೃಥು ಚರಿತ್ರೆ, ಪುರಂಜನೋಪಾಖ್ಯಾನ, ಋಷಭಾವತಾರ, ಭರತೋಪಾಖ್ಯಾನವನ್ನು ಎರಡನೇ ದಿನ ಪ್ರವಚನ ನಡೆಸಲಾಯಿತು.
 
 
ಈ ಕಥಾಶ್ರವಣದ ಫಲವಾಗಿ ಧನಧಾನ್ಯ ಅಭಿವೃದ್ಧಿಯಾಗುವುದು. ಬೆಳಗ್ಗೆ ವಿಷ್ಣುಸಹಸ್ರನಾಮ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ವೇದಮೂrfti ಕೇಶವ ಭಟ್ ಕೇಕಣಾಜೆ ಅವರಿಂದ ಶ್ರೀಮದ್ಭಾಗವತ ಪಾರಾಯಣ ನಡೆಯಿತು. ರಾತ್ರಿ ಭಾಗವತ ಪುರಾಣಾಧಾರಿತ ಯಕ್ಷಗಾನ ದಕ್ಷಯಜ್ಞ-ಧ್ರುವ ಚರಿತ್ರೆ.

LEAVE A REPLY

Please enter your comment!
Please enter your name here