ಪೂರ್ವಸಿದ್ಧತಾ ಶಿಬಿರ

0
473

 
ಮ0ಗಳೂರು ಪ್ರತಿನಿಧಿ ವರದಿ
ಜೂನ್ 21ರಂದು ಜರಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪೂರ್ವ ಸಿದ್ಧತಾ ಯೋಗ ತರಬೇತಿ ಶಿಬಿರಗಳು ಪ್ರಾರಂಭಗೊಂಡಿವೆ.
 
 
 
ಜೂನ್ 01 ರಂದು ಮಂಗಳೂರಿನ ಕೊಟ್ಟಾರದ ಕೌಸ್ತುಭಾ ಸಭಾಂಗಣದಲ್ಲಿ ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿರವರ ಸಾರಥ್ಯದಲ್ಲಿ ಜರಗುವ 20 ದಿನಗಳ ಉಚಿತ ಯೋಗ ತರಬೇತಿ ಶಿಬಿರಕ್ಕೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ:ದೇವದಾಸ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
 
 
 
ಅವರು ಮಾತನಾಡಿ, 2015ರ ಜೂನ್ 21ರಂದು ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಭಾರತವು ತನ್ನ ಸಂಪದ್ಭರಿತವಾದ ಆರೋಗ್ಯಕರ ಜೀವನ ಪದ್ಧತಿಯಾದ “ಯೋಗ“ದ ಬಗ್ಗೆ ವಿಶ್ವದ ಗಮನ ಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ಟಿ.ಎಂ.ಎ.ಪೈ.ಕನ್ವೆನ್ಷನ್ ಹಾಲ್ನಲ್ಲಿ ಹಾಗೂ ಜಿಲ್ಲೆಯಾದ್ಯಂತ ದಾಖಲೆ ಸಂಖ್ಯೆಯ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
 
 
 
ಈ ಬಾರಿಯ ಕಾರ್ಯಕ್ರಮದಲ್ಲೂ ಸರ್ವರೂ ಆಸಕ್ತಿಯಿಂದ ಭಾಗವಹಿಸಿ ಆರೋಗ್ಯ ಪೂರ್ಣ ಸಮಾಜದ ಸಂಕಲ್ಪವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು

LEAVE A REPLY

Please enter your comment!
Please enter your name here