ಪೂಜಾರಿ ಪ್ರಶ್ನೆಗೆ ಉತ್ತರ

0
365

ಮಂಗಳೂರು ಪ್ರತಿನಿಧಿ ವರದಿ
ಎತ್ತಿನ ಹೊಳೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಸದನದಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವರು.
 
 
ಎತ್ತಿನ ಹೊಳೆ ಯೋಜನೆಯ ಒಟ್ಟು ಗಾತ್ರವೆಷ್ಟು? ಮತ್ತು ಈ ಯೋಜನೆಯಿಂದ ಪ್ರಯೋಜನ ಪಡೆಯುವ ತಾಲೂಕು ಮತ್ತು ಜಿಲ್ಲೆಗಳಾವುವು? ಗುತ್ತಿಗೆ ಪಡೆದ ಸಂಸ್ಥೆಗಳಾವುವು? ಈ ಯೋಜನೆಯ ಪ್ರಾರಂಭದಿಂದ ಸರ್ಕಾರ ಯೋಜನೆಗಾಗಿ ಮಾಡಿದ ವೆಚ್ಚವೆಷ್ಟು ಮತ್ತು ಎತ್ತಿನ ಹೊಳೆ ಯೋಜನೆಯ ಕುರಿತು ಆತಂಕಕ್ಕೀಡಾಗಿರುವ ಕರಾವಳಿ ಭಾಗದ ಜನರ ಆತಂಕ ನಿವಾರಿಸಲು ಸರ್ಕಾರ ತೆಗೆದುಕೊಂಡ ಕ್ರಮವೇನು ಎಂದು ಕೋಟಾ ಶ್ರೀನಿವಾಸ ಪೂಜಾರಿಯವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಸದನವನ್ನು ಕೇಳಿದಾಗ ಉತ್ತರಿಸಿದ ಜಲ ಸಂಪನ್ಮೂಲ ಸಚಿವರು ಯೋಜನಾ ವರದಿಯ ಮೊತ್ತವು ರೂಪಾಯಿ 12912.36 ಕೋಟಿಗಳಾಗಿದ್ದು ಸದರಿ ಯೋಜನೆಯಿಂದ ಕೋಲಾರ, ಚಿಕ್ಕ ಬಳ್ಳಾಪುರ, ರಾಮ ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಯೋಜನೆಗೆ ಅಕ್ಟೋಬರ್ 2016 ರ ಅಂತ್ಯದ ವರೆಗೆ 1825.43 ಕೋಟಿ ಖರ್ಚಾಗಿದೆ ಎಂದು ತಿಳಿಸಿದರು.
 
 
 
ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ದಿನಾಂಕ:18/09/2014 ರಂದು ಸನ್ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಚಿವರುಗಳ ಮತ್ತು ಸಂಸತ್ ಸದಸ್ಯರುಗಳ ಸಭೆಯನ್ನು ನಡೆಸಿದ್ದು ಸಮಗ್ರ ಕುಡಿಯುವ ನೀರಿನ ಯೋಜನೆಯ ಬಗ್ಗೆ ಮನವರಿಕೆ ಮಾಡಲಾಗಿದ್ದು ಎತ್ತಿನ ಹೊಳೆ ಯೋಜನೆಯಿಂದ ಕರಾವಳಿ ಭಾಗಕ್ಕಾಗುವ ನೀರಾವರಿ ನಷ್ಟವನ್ನು ತುಂಬಲು ಜೂನ್ ನಿಂದ ನವೆಂಬರ್ ವರೆಗೆ ಮಾತ್ರ 24.01 ಟಿ.ಎಮ್.ಸಿ ನೀರನ್ನು ಕೆಳ ಭಾಗದ ಜನರಿಗೆ ಯಾವುದೇ ನಷ್ಟವಾಗದಂತೆ ಎತ್ತಿ ಪೂರ್ವ ಭಾಗದ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಯೋಜಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here