ಪುರುಷರ ಖೋ-ಖೋ ಸ್ಪರ್ಧೆ 2016-17

0
630

ನಮ್ಮ ಪ್ರತಿನಿಧಿ ವರದಿ
ನಮ್ಮ ವಿಶ್ವವಿದ್ಯಾನಿಲಯವು ಶೈಕ್ಷಣಿಕ, ಕ್ರೀಡೆ, ಸಂಶೋಧನೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಬಹಳಷ್ಟು ಒಳ್ಳೆಯ ಸಾಧನೆಯನ್ನು ಮಾಡುತ್ತಿದೆ. ದೈಹಿಕ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅತ್ಯುತ್ತಮ ಸಾಧನೆಯನ್ನು ಮಾಡಿದೆ ಹಾಗೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮತ್ತು ಖ್ಯಾತಿಯನ್ನು ಪಡೆದಿರುವ ಹಲವಾರು ಕ್ರೀಡಾಪಟುಗಳನ್ನು ತಯಾರು ಮಾಡಿರುತ್ತದೆ.
 
 
 
 
ಅರ್ಜುನ ಪ್ರಶಸ್ತಿ ವಿಜೇತರಾದ ವಂದನಾ ರಾವ್ ಮತ್ತು ಎಂ.ಆರ್. ಪೂವಮ್ಮ, ಕಬಡ್ಡಿಯಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ ಮಮತ ಪೂಜಾರಿ, ಒಲಿಂಪಿಯನ್ ಸಹನಾ ಕುಮಾರಿ, ಅಂತರ್ರಾಷ್ಟ್ರೀಯ ಈಜುಪಟು ಅನಿಕೇತ್ ಡಿ’ಸೋಜ (ಏಕಲವ್ಯ ಪ್ರಶಸ್ತಿ ವಿಜೇತ), ಅಂತರ್ ರಾಷ್ಟ್ರೀಯ ವೆಯ್ಟ್ ಲಿಫ್ಟರ್ ಹಳಾದ ಸತೀಶ್ ರೈ ಮತ್ತು ಪುಷ್ಪರಾಜ ಹೆಗ್ಡೆ (ಏಕಲವ್ಯ ಪ್ರಶಸ್ತಿ ವಿಜೇತರು) ಅಂತರ್ ರಾಷ್ಟ್ರೀಯ ಅತ್ಲೀಟ್ ಗಳಾದ ಅಶೋಕ್ ಕೆ.ಎಸ್., ಜಮಾಲುದ್ದೀನ್, ಜಾಯ್ಲಿನ್ ಲೋಬೋ, ಬಸವರಾಜ ಹೊರಟ್ಟಿ, ಅಂತರ್ರಾಷ್ಟ್ರೀಯ ಪವರ್ ಲಿಫ್ಟರ್ ಗಳಾದ ನೇಹಾ (ಏಕಲವ್ಯ ಪ್ರಶಸ್ತಿ ವಿಜೇತೆ), ಹೆರಾಲ್ಡ್ ಪಾಯಸ್, ಅಕ್ಷತಾ ಪೂಜಾರಿ, ದೀಪಾ ಕುಲಾಲ್, ನೇತ್ರಾವತಿ, ಅಮಿತಾ, ಅಂತರ್ರಾಷ್ಟ್ರಿಯ ಕಬಡ್ಡಿ ಆಟಗಾರ ಉದಯ ಚೌಟ(ಏಕಲವ್ಯ ಪ್ರಶಸ್ತಿ ವಿಜೇತ), ಪ್ರೊ.ಕಬಡ್ಡಿ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ಸಚಿನ್ ಸುವರ್ಣ, ಅಂತರ ರಾಷ್ಟ್ರೀಯ ಈಜುಪಟು ವೈಷ್ಣವ ಹೆಗ್ಡೆ, ಒಲಿಂಪಿಯನ್ ಧಾರುಣ್, ಅಂತರರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿ ಬಾಂಧವ್ಯ, ಡೆಕಾತ್ಲೇಟ್ ಅಭಿಷೇಕ್ ಶೆಟ್ಟಿ, ಬಾಲ್ ಬ್ಯಾಡ್ಮಿಂಟನ್ ಆಟಗಾರರಾದ ಶ್ರುತಿ ಮತ್ತು ಕಾವ್ಯ ಇವರು ವಿಶ್ವವಿದ್ಯಾನಿಲಯದ ಪ್ರಸಿದ್ಧ ಆಟಗಾರರಲ್ಲಿ ಕೆಲವರು ಆಗಿರುತ್ತಾರೆ. ಅಲ್ಲದೆ ವಿಶ್ವವಿದ್ಯಾನಿಲಯದಿಂದ ಪ್ರಥಮ ಬಾರಿಗೆ 2015ರಲ್ಲಿ ಪ್ರಿಯಾಂಕ ಕಲಗಿ ಇವರು ದಕ್ಷಿಣ ಕೊರಿಯದಲ್ಲಿ ನಡೆದ ವಿಶ್ವಮಟ್ಟದ ವಿಶ್ವ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ. ಹೀಗೆ ನೂರಾರು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ ಹೆಮ್ಮೆ ಮಂಗಳೂರು ವಿಶ್ವವಿದ್ಯಾನಿಲಯದ್ದು. 2015-16ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಂತರ್ ವಿಶ್ವವಿದ್ಯಾನಿಲಯ ಕ್ರೀಡೆಗಳಲ್ಲಿ ಪ್ರಥಮ ಬಾರಿಗೆ 33 ಪದಕಗಳನ್ನು ಪಡೆದಿರುತ್ತದೆ.
 
 
 
 
ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ, ನವದೆಹಲಿ, ಇವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 2016-17ನೇ ಸಾಲಿನಲ್ಲಿ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಸ್ಪರ್ಧೆಯನ್ನು ಆಯೋಜಿಸಲು ಮಂಜೂರು ಮಾಡಿರುತ್ತದೆ. ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಸ್ಪರ್ಧೆಯು ಜನವರಿ 10ರಿಂದ 13, 2017ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಮೈದಾನದಲ್ಲಿ ಜರಗಲಿರುವುದು. 60 ವಿಶ್ವವಿದ್ಯಾನಿಲಯಗಳಿಂದ ಸುಮಾರು 720 ಕ್ರೀಡಾಪಟುಗಳು, 120 ತರಬೇತಿದಾರರು ಮತ್ತು ವ್ಯವಸ್ಥಾಪಕರು ಭಾಗವಹಿಸಲಿರುವರು. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ತಂಡದ ವ್ಯವಸ್ಥಾಪಕರಿಗೆ ವಸತಿ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
 
 
 
ಈ ಕ್ರೀಡಾಕೂಟವನ್ನು ಜನವರಿ 10, 2017ರಂದು ಪೂರ್ವಾಹ್ನ 11.00 ಗಂಟೆಗೆ ಕರ್ನಾಟಕ ಸರಕಾರದ ಯುವಜನ ಸೇವೆ, ಕ್ರೀಡಾ ಮತ್ತು ಮೀನುಗಾರಿಕಾ ಇಲಾಖೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್, ಇವರು ಉದ್ಘಾಟಿಸಲಿರುವರು. ಐವನ್ ಡಿಸೋಜ, ಎಂ.ಎಲ್.ಸಿ. ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕರು, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಮತ್ತು ವಿಶ್ವವಿದ್ಯಾನಿಲಯದ ಕ್ರೀಡಾ ನೀತಿ ಮತ್ತು ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಿರುವರು. ಖೋ-ಖೋ ಕ್ರೀಡೆಯಲ್ಲಿ ಅರ್ಜುನ ಪ್ರಶಸ್ತಿ ವಿಜೇತರಾದ ಎಸ್. ಪ್ರಕಾಶ್, ಇವರು ಗೌರವಾನ್ವಿತ ಅತಿಥಿಗಳಾಗಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಕೆ. ಬೈರಪ್ಪ, ಇವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
 
 
ದಿನಾಂಕ 13.01.2017ರಲ್ಲಿ ಅಪರಾಹ್ನ 3.30 ಗಂಟೆಗೆ ನಡೆಯಲಿರುವ ಬಹುಮಾನ ವಿತರಣಾ ಸಮಾರಂಭದಲ್ಲಿ ಯು.ಟಿ. ಖಾದರ್, ಮಾನ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಹಾಗೂ ಬಹುಮಾನವನ್ನು ವಿತರಿಸಲಿರುವರು. ಖೋ-ಖೋ ದಲ್ಲಿ ಅರ್ಜುನ ಪ್ರಶಸ್ತಿ ವಿಜೇತರಾದ ಶೋಭಾ ನಾರಾಯಣ, ಖೋ-ಖೋದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತರಾದ ಡಬ್ಲ್ಯೂ ಡಿ. ದೀಪಕ್, ಇವರು ಅತಿಥಿ ಗಣ್ಯರಾಗಿ ಭಾಗವಹಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಕೆ. ಬೈರಪ್ಪ, ಇವರು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
 
 
 
ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಕೆ. ಬೈರಪ್ಪ, ಇವರು ಈ ಚಾಂಪಿಯನ್ಶಿಪ್ ನ ಮುಖ್ಯ ಪೋಷಕರಾಗಿದ್ದು, ಮಾನ್ಯ ಕುಲಸಚಿವರಾದ ಪ್ರೊ. ಕೆ.ಎಂ. ಲೋಕೇಶ್, ಇವರು ಪೋಷಕರಾಗಿರುತ್ತಾರೆ ಮತ್ತು ಈ ಚಾಂಪಿಯನ್ ಶಿಪ್ ನ ಸಂಘಟನಾ ಕಾರ್ಯದರ್ಶಿಯಾಗಿ ಡಾ. ಕಿಶೋರ್ ಕುಮಾರ್ ಸಿ.ಕೆ., ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಇವರು ಕಾರ್ಯ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here