ಪುರಾಣ ವಾಚನ – ಪ್ರವಚನ ಪ್ರಾರಂಭ

0
503

 
ವರದಿ-ಚಿತ್ರ: ಸುನೀಲ್ ಬೇಕಲ್
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಭಾನುವಾರ ರಾತ್ರಿ ಪುರಾಣ ವಾಚನ – ಪ್ರವಚನ ಕಾರ್ಯಕ್ರಮಕ್ಕೆ ಹಿರಿಯ ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಚಾಲನೆ ನೀಡಿ ಶುಭ ಹಾರೈಸಿದರು.
 
ಎರಡು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 8ರ ವರೆಗೆ ಶ್ರೀ ಮಾರ್ಕಂಡೇಯ ಪುರಾಣ ವಾಚನ – ಪ್ರವಚನ ನಡೆಯಲಿದೆ. (17-07-2016 ರಿಂದ 16-09-2016ರ ತನಕ) ಭಾನುವಾರ ಉಜಿರೆಯ ಹವ್ಯಾಸಿ ಕಲಾವಿದ ಅಶೋಕ ಭಟ್ ಮತ್ತು ದಿವಾಕರ ಆಚಾರ್ ವಾಚನ – ಪ್ರವಚನ ನಡೆಸಿಕೊಟ್ಟರು.
 
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here