ಪುಟ್ಟ ಕೈಗಳು ಹಸಿವು ಮರೆಸಿದವು!

0
542

ಬೇಷ್…ಸಂಘಟನೆ ಅಂದ್ರೆ ಹೀಗಿರಬೇಕು…ಕೇವಲ ಫೋಗೋಗೆ ಫೋಸ್ ನೀಡುತ್ತಾ ಪ್ರಚಾರಕ್ಕೇ ಸೀಮಿತವಾಗಿರುವ ಅದೆಷ್ಟೋ ಸಂಘ ಸಂಸ್ಥೆಗಳು ಸಂಘಟನೆಗಳನ್ನು ಕಾಣುತ್ತೇವೆ. ಆದರೆ ಈ ಸಂಘಟನೆ ಇವೆಲ್ಲವುಗಳಿಗಿಂತ ವಿಭಿನ್ನ. ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯದ ಕಾರ್ಯವನ್ನು ಈ ಸಂಘಟನೆ ಮಾಡಿದೆ.

ಏನೀ ವಿಚಾರ…? : ಮಂಗಳೂರಿನ ಶ್ರೀ ಸಾಯಿ ಸಾಗರ್ ಫೌಂಡೇಷನ್(ರಿ.) ಪ್ರವರ್ತಿತ ಪರಿಸರ ಸ್ನೇಹಿ ತಂಡ ಹಸಿದವರಿಗೆ ಅನ್ನ ಎಂಬ ವಿಶೇಷ ಆಂದೋಲನ ನಡೆಸಿತು. ಮಿಲಾಗ್ರೇಸ್ ಚರ್ಚ್ ಪರಿಸರದಿಂದ ರೈಲ್ವೇ ಸ್ಟೇಶನ್ ತನಕ ಅಲ್ಲಲ್ಲಿ ಕುಳಿತಿದ್ದ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ತನೀಶ್ ಆಚಾರ್ಯ ಹಾಗೂ ಸುಹಾನಿ ಪ್ರಭು ನೇತೃತ್ವದಲ್ಲಿ ಶಮಿತ್, ಮಹಿತ್,ವಾರುಣಿ,ವರ್ಷಿಣಿ ಸೇರಿ ಈ ಕಾರ್ಯವನ್ನು ಯಶಸ್ವಿಯಾಗಿಸಿದರು. ಈ ತಂಡದ ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿದ್ದು ಪೀಸ್ ಲ್ಯಾಂಡ್ ಅಪಾರ್ಟ್‍ಮೆಂಟ್‍ನ ಬಂಧುಗಳು. ಇಷ್ಟೇ ಅಲ್ಲ ಯಾವೊಂದು ಆಹಾರವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟದೆ ಬಾಳೆ ಎಲೆಯಲ್ಲಿ ಕಟ್ಟಿಕೊಡುವ ಮೂಲಕ ಆದರ್ಶ ಮೆರೆದರು. ಮಕ್ಕಳ ಮನವಿಗೆ ಸ್ಪಂದಿಸಿದ ಅಪಾರ್ಟ್‍ಮೆಂಟ್ ಸದಸ್ಯರ ಕಾರ್ಯ ಶ್ಲಾಘನಾರ್ಹವಾಗಿತ್ತು.
ಶ್ರೀ ಸಾಯಿ ಸಾಗರ್ ಫೌಂಡೇಶನ್(ರಿ.) ಸಂಸ್ಥಾಪಕ ಪ್ರೀತಂ ಸಾಗರ್ ಹಾಗೂ ಟ್ರಸ್ಟಿ ಪವಿತ್ರ ಆಚಾರ್ಯ ಪರಿಸರ ಸ್ನೇಹಿ ತಂಡಕ್ಕೆ ಬೆನ್ನೆಲುಬಾಕಿ ನಿಲ್ಲುವ ಭರವಸೆ ನೀಡಿದರು.

LEAVE A REPLY

Please enter your comment!
Please enter your name here