ಪಿಲಿಕುಳ ರಜಾ-ಮಜಾ

0
692

 
ಮಂಗಳೂರು ಪ್ರತಿನಿಧಿ ವರದಿ
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಶ್ರಯದಲ್ಲಿ ಈ ಬಾರಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
 
ತಿಂಗಳಿಗೊಂದು ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ ತಿಂಗಳಲ್ಲಿ ಮಕ್ಕಳ ಸಂಭ್ರಮಕ್ಕೆ ಪಿಲಿಕುಳ ಸಜ್ಜಾಗುತ್ತಿದೆ. ಏಪ್ರಿಲ್ 25 ರಿಂದ 30ರ ತನಕ “ಪಿಲಿಕುಳ ರಜಾ-ಮಜಾ” ಜರುಗಲಿದ್ದು ಜಿಲ್ಲೆಯ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಲಿದ್ದಾರೆ.ಬೆಳಿಗ್ಗೆ 9.45ಕ್ಕೆ ಆರಂಭಗೊಂಡು ಸಂಜೆ 4.30ರವರೆಗೆ ಶಿಬಿರ ಜರುಗಲಿದೆ.
ಕ್ರಿಯಾತ್ಮಕ ಚಿತ್ರಕಲೆ, ಸ್ವರಾನುಕರಣೆ, ನೆನಪಿಗೆ ಚಿಕಿತ್ಸೆ, ಮೈಮ್, ಜಾದೂ, ರಂಗಕ್ರಿಯೆ, ಸಂಗೀತ, ನಾಟಕ, ಗೊಂಬೆ ತಯಾರಿ, ಪತ್ರಿಕೆ ತಯಾರಿ, ಕೊಲಾಜ್, ವರ್ಲೆಆರ್ಟ್, ಕ್ಲೇ ಮೋಡಲ್, ಆಟಗಳು, ವಿಜ್ಙಾನಮಾದರಿ, ವಿನೋದ ಗಣಿತ, ಒರಿಗಾಮಿ, ಫೇಸ್ ಪೈಂಟಿಂಗ್, ಟ್ಯಾಟೂ ಮೊದಲಾದ ಕ್ರಿಯಾಶೀಲ ಚಟುವಟಿಕೆಗಳನ್ನು ಕಾರ್ಯಾಗಾರ ಒಳಗೊಂಡಿದೆ.
 
 
ಜೊತೆಗೆ ಔಷಧಿ ಸಸ್ಯಗಳ ಪರಿಚಯ, ಮೃಗಾಲಯ ,ಕುಶಲಕರ್ಮಿ ಗ್ರಾಮ, ವಿಜ್ಙಾನ ಕೇಂದ್ರ, ಸಂಸ್ಕೃತಿ ಗ್ರಾಮಗಳ ಭೇಟಿಯ ವಿಶೇಷ ಅವಕಾಶವನ್ನು ಈ ಶಿಬಿರದಲ್ಲಿ ಒದಗಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
 
 
6 ದಿನಗಳ ಕಾಲ ಶಿಬಿರಕ್ಕೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಸಂಘಟಕರು ಒದಗಿಸಲಿದ್ದು ಬೆಳಿಗ್ಗೆ ಮತ್ತು ಸಂಜೆ ಲಘುಪಹಾರ, ಪಾನೀಯ ಮಧ್ಯಾಹ್ನದ ಊಟ ಜೊತೆಗೆ ಮಂಗಳೂರು ನಗರ ಕೇಂದ್ರದಿಂದ ಬಸ್ಸಿನ ಸೌಲಭ್ಯವನ್ನೂ ಒದಗಿಸಲು ನಿರ್ಧರಿಸಲಾಗಿದೆ.
 
 
2000ರೂಪಾಯಿ ಶುಲ್ಕದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಬೇಸಿಗೆ ಶಿಬಿರದ ಸಂಪೂರ್ಣ ಮಾಹಿತಿಯನ್ನು ಡಾ.ನಿತಿನ್ ಎನ್.ಕೆ 9686673237 ಮತ್ತು ಮೈಮ್ ರಾಮ್ದಾಸ್ 9448654040 ಇವರಿಂದ ಪಡೆಯಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here