ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ

0
158

ಮ0ಗಳೂರು ಪ್ರತಿನಿಧಿ ವರದಿ
ಪಿಲಿಕುಳ ನಿಸರ್ಗಧಾಮದ ಉದ್ಯಾನದ 10 ಎಕೆರೆ ವಿಶಾಲವಾದ ಕೆರೆಯಲ್ಲಿ ಕಟ್ಲ, ಕಾರ್ಪ್, ರೋವು ಇತ್ಯಾದಿ ತಳಿಯ 30000 ಮೀನುಮರಿಗಳನ್ನು ಸೆಪ್ಟಂಬರ್ 24 ರಂದು ನೀರಿಗೆ ಬಿಡಲಾಯಿತು. ಕಾರ್ಯಕ್ರಮವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಯಿತು.
 
 
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಗಣೇಶ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಮೀನುಗಾರಿಕಾ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
 
 
ಈಗಾಗಲೇ ಈ ಕೆರೆಯಲ್ಲಿ ವಿವಿಧ ಜಾತಿಯ ಸುಮಾರು 1 ಲಕ್ಷಕ್ಕೂ ಮೀರಿ ವಿವಿಧ ತಳಿಯ ಮೀನುಗಳಿರುವುದಾಗಿ ಅಂದಾಜಿಸಲಾಗಿದೆ. ಪಿಲಿಕುಳದಿಂದ ನೊಂದಾಯಿತ ಸದಸ್ಯರಿಗೆ ಗಾಳಶಿಕಾರಿ(ಆ್ಯಂಗ್ಲಿಂಗ್) ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

LEAVE A REPLY

Please enter your comment!
Please enter your name here