ಪಿಯು ಮೌಲ್ಯಮಾಪನ ಇನ್ನೂ ಕಗ್ಗಂಟು

0
268

ಬೆಂಗಳೂರು ಪ್ರತಿನಿಧಿ ವರದಿ
ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನ ಇನ್ನೂ ಕಗ್ಗಂಟಾಗಿದ್ದು, ಬಗೆಹರೆಯದ ಸಮಸ್ಯೆಯಾಗಿ ಉಳಿದುಕೊಂಡಿದೆ. ಇನ್ನೂ ಪಿ ಯು ಪರೀಕ್ಷೆ ಮೌಲ್ಯಮಾಪನ ಆರಂಭವಾಗಿಲ್ಲ.
 
ದ್ವಿತೀಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆಗೆ ಖಾಸಗಿ ಶಿಕ್ಷಕರು ಹಾಜರಾಗದೆ ಇದ್ದ ಪರಿಣಾಮ ಮೌಲ್ಯಮಾಪನ ವಿಚಾರದಲ್ಲಿ ಸರ್ಕಾರ ಮತ್ತೊಮ್ಮೆ ಫೇಲ್ ಆಗಿದೆ.
ಒಂದೆಡೆ ಪದವಿ ಪೂರ್ವ ಕಾಲೇಜು ಶಿಕ್ಷಕರು ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಇನ್ನೊಂದೆಡೆ ಶುಕ್ರವಾರದಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಮೇ 2ಕ್ಕೆ ರಿಸಲ್ಟ್ ಪ್ರಕಟವಾಗುವುದಾಗಿ ಎಂದು ನಿನ್ನೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದರು. ಆದರೆ ಇವತ್ತೂ ಕೂಡ ಮೌಲ್ಯಮಾಪನ ಆರಂಭವಾಗಿಲ್ಲ. ಕೋಡಿಂಗ್-ಡಿಕೋಡಿಂಗ್ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.
 
 
ಉಪನ್ಯಾಸಕರು ಮೌಲ್ಯಮಾಪನಕ್ಕೆ ಬರದಿದ್ದರೆ, ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮೂಲಕ ಮಾಡಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು. ಆದರೆ ಇದೀಗ ಸರ್ಕಾರಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರೆ, ಖಾಸಗಿ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇದ್ದಿದ್ದರಿಂದ ಫಲಿತಾಂಶ ಪ್ರಕಟ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.

LEAVE A REPLY

Please enter your comment!
Please enter your name here