ಪಿಂಚಣಿದಾರರ ಸಭೆ

0
254

ವರದಿ: ಶ್ಯಾಮ ಪ್ರಸಾದ್ ಬದಿಯಡ್ಕ
ಕೇರಳ ರಾಜ್ಯ ಪಿಂಚಣಿದಾರರ ಸಂಘದ ಸಭೆ ಬದಿಯಡ್ಕ ಹರಿನಿಲಯದಲ್ಲಿ ಸೋಮವಾರ ಜರಗಿತು. ಸಂಘದ ಅಧ್ಯಕ್ಷ ನಾರಾಯಣ ಭಟ್ ಮೈರ್ಕಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜುಲೈ 23ರಂದು ಅನಂತಪುರದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಸಮಾವೇಶವನ್ನು ಯಶಸ್ವಿಗೊಳಿಸಲು ಕರೆಯಿತ್ತರು. ಸಂಘಟನೆಗೆ ಸೇರಿಸಲು ಬಾಕಿಯಿರುವ ಪಿಂಚಣಿದಾರರನ್ನು ಸಂಪರ್ಕಿಸಿ ಸಂಘಟನೆಯನ್ನು ಬಲಪಡಿಸಲು ಕಾರ್ಯೋನುಮುಖರಾಗಬೇಕು ಎಂದರು. ಶಿವಶಂಕರ ಭಟ್, ಸುಂದರ ಮುಂಡಿತ್ತಡ್ಕ, ಸೀತಾರಾಮ ರಾವ್ ಪಿಲಿಕೂಡ್ಲು, ಶ್ರೀಧರ ಭಟ್, ಈಶ್ವರ ರಾವ್, ಈಶ್ವರ ನಾಯ್ಕ್, ಕೃಷ್ಣ ಭಟ್ ಪೆರ್ವ ಮೊದಲಾದವರು ಮಾತನಾಡಿದರು. ಜಯಶ್ರೀ ಮತ್ತು ವಿಶಾಲಾಕ್ಷಿ ಪ್ರಾರ್ಥನೆ ಹಾಡಿದರು. ಕೇಶವ ಪ್ರಸಾದ ಕುಳಮರ್ವ ಸ್ವಾಗತಿಸಿ ಕಾರ್ಯದರ್ಶಿ ಉದನೇಶ ವೀರ ಕಿಳಿಂಗಾರು ವಂದಿಸಿದರು

LEAVE A REPLY

Please enter your comment!
Please enter your name here