ಪಾಷಾಣೀಯಂ!

0
216

ಮಸೂರ ಅಂಕಣ: ಆರ್ ಎಂ ಶರ್ಮ
ಪಾಷಾಣ ಎಂದರೆ ಕಲ್ಲು.
ಕಲ್ಲು-ಬಿಗಿ-ಗತ್ತಿ-ಕಠಿಣ-ಕಠೋರ ಒಟ್ಟಿನಲ್ಲಿ ಮೃದುವಲ್ಲದ,ಮೃದುವಾಗದ,ಹೊಂದಿಕೊಳ್ಳದ,ಒಗ್ಗದ,ಬಗ್ಗದ-ಗಡಸುತನ.
ಶಿಲೆ ಎಂದರೂ ಅದೇ ಅಥ9-ಮೇಲಾಗಿ ಸಂವೇದನಾ ಹೀನತೆ-ಕಾರುಣ್ಯಹೀನ ಎಂದರೂ ಸಲ್ಲುತ್ತದೆ.
ಕಲ್ಲಿಗೆ-ಕಂಪನವೂ ಇಲ-ಅಲ್ಲಾಡದು,
ಅನುಕಂಪವೂ ಇಲ್ಲ-ಕಾರಣ ಕರುಣಾ ಹೀನ.
ಯಮನಿಗೆ-ಯಮಧಮ9ನಿಗೆ ಕಠಿಣ ಹೃದಯ ಎನ್ನುತ್ತಾರೆ-ಕಾರಣ ಪ್ರಾಣವನ್ನು ಹೊತ್ತೊಯ್ಯುವ ಕಾಯಕ ಅವನದು.
ಅದಕ್ಕೇ ದಾಸರು ಹಾಡಿದರು-ಅಲವತ್ತುಕೊಂಡರು-“ಅಂತಕನಿಗೆ ಕಿಂಚಿತ್ತೂ ಕರುಣವಿಲ್ಲ”-ಎಂತ.
ಅದು ಹಾಗಿರಲಿ ಪ್ರಸ್ತುತಿಯ ಸಾಂದ್ರ ಭಾಗಕ್ಕೆ ಬರೋಣ.
ಪ್ರತಿ ದಿನ-ಪ್ರತಿಘಂಟೆ-ಪ್ರತಿ ನಿಮಿಷ- ಪ್ರತಿಸೆಕೆಂಡು-ಸಾಧ್ಯವಾದರೆ ಪ್ರತಿ ನ್ಯಾನೋಸೆಕೆಂಡು,ಜಗತ್ತಿನ ಎಲ್ಲೆಲ್ಲೂ ಅಪಘಾತ-ರಸ್ತೆ ಅಪಘಾತ/ಗಳು ಆಗುತ್ತಲೇ ಇರುತ್ತವೆ ಹಾಗೂ ಆಗಿಸಲ್ಪಡುತ್ತಲೇ ಇರುತ್ತದೆ.
ಪರಿಣಾಮವಾಗಿ-ಜೀವಹಾನಿ,ಆಸ್ತಿಹಾನಿ,ಅನನುಕೂಲತೆ ಇವೇ ಪ್ರಾಪ್ತಿ.
ಇದು ಗ್ರಹಚಾರವೇ-ದೌಭಾ9ಗ್ಯವೇ-ಅಜಾಗರೂಕತೆಯೆ ಎಂದರೆ ನೇರ ಉತ್ತರ ಅವಸರ.
ಅವಸರಕ್ಕೆ ಸ್ವರಸೇರಿಸುವ ಅನೇಕ,ಅನ್ಯೋನ್ಯ,ಅನನ್ಯ ಸಂಗತಿಗಳು-ಸಂಗಾತಿಗಳು ಸದಾ ಕೈಜೋಡಿಸುವವೇ.
ರಸ್ತೆ ಬಳಕೆ,ದುಬ9ಳಕೆ,ದಬ್ಬಾಳಿಕೆ ಇವೇ ಪರಿಕರಗಳು-ಪೂರಕಗಳು.
ಭಗವಂತನ ಮಾತು-“ಜಾತಸ್ಯ ಮರಣಂ ಧೃವಂ”-ಎಂತ ಸುಮ್ಮನಾಗೋಣ ಎಂದರೆ ಶಿಷ್ಟಾಚಾರಕ್ಕೇ ಅಪಚಾರವಲ್ಲವೇ.
ಅಪಚಾರ-ಅಪಪ್ರಚಾರ ಎಲ್ಲಾ ಅಧಾರಗಳನ್ನು ಒಕ್ಕಲೆಬ್ಬಿಸುತ್ತದೆ-ಸುಸ್ತಾಗಿಸುತ್ತದೆ.
ಅಲ್ಲಿಗೆ ದಿವ್ಯ ಮೌನ-ಸ್ಮಶಾನ ಮೌನ.
ಮೌನ-ಮಾನ-ಸಮ್ಮಾನ-ದುಮ್ಮಾನ-ಬಿಗುಮಾನ ಎಲ್ಲವನ್ನೂ ಮೂಲೆಗುಂಪಾಗಿಸುತ್ತದೆ.
ಮತ್ತೇನಿದೆ ಹೇಳಲು-ಹೇಳಿಕೊಳ್ಳಲು.
ಹೆತ್ತವರಿಗೆ,ಕೂಡಿದವರಿಗೆ,ಕೊಂಡವರಿಗೆ,ಕೊಟ್ಟವರಿಗೆ ಹೀಗೆ ಧಣಿಗಳಿಗೆ ಧನಿ ಅಡಗುತ್ತದೆ-ಶೋಕ ನಿರಂತರವಾಗುತ್ತದೆ.
ಇದಕ್ಕೆ ಶಂಕೆ ಇಲ್ಲ.
ಆದುದರಿಂದ ಬೇಕು ಶಂಕೆ,ಅಂಕುಶ.
ಅಂಕುಶ ಕುಶಲಕ್ಕೆ ಹರಿಕಾರ.
ನಿತ್ಯ ಓದುತ್ತೇವೆ ಸುದ್ದಿಪತ್ರಿಕೆಗಳಲ್ಲಿ,ನೋಡುತ್ತೇವೆ ದೃಶ್ಯಮಾಧ್ಯಮಗಳಲ್ಲಿ-ರಸ್ತೆ ಅವಘಡ-ಎದೆ ಡವಡವ-ಇದೇ ರುದ್ರತಾಂಡವ.
ರಕ್ತದ ಓಕುಳಿ,ಅಂಗ ಪ್ರತ್ಯಂಗಗಳ ಚಲ್ಲಾಟ,ಕಿರುಚಾಟ,ತಿರುಚಾತ,ಪೀಕಲಾಟ-ಅಕಟಕಟ ಏನೀ ವಿಪಯಾಸ?
ಅಕಾಲಮೃತ್ಯು-ಜನ ಜಾನುವಾರು ಜೀವನ ಎಲ್ಲ ತಿರುಗು ಮುರುಗು.
ಇನ್ನೆಲ್ಲಿ ಹಸನು ಎದುರಿಗೇ ಮಸಣ-ಇಡೆ ಪಾಷಾಣೀಯಂ.
ಸಾಯುತ್ತಿದ್ದರೂ ಯಾರೂ ಸಹಾಯಕ್ಕೆ ಬರಲೊಲ್ಲರು-ಸಲ್ಲರು.
ಕಾರಣ ಅಲ್ಲಿದೆ ಜಾಣತನ,ಜಾರುತನ,ಜತನ.
ಅಪಘಾತ-ಕಾಯದೆ-ಕೋಟು-ಖಟ್ಲೆ ಇವೇ ತಲೆ.
ಅದಕ್ಕೇ ಜನ ಹತ್ತಿರವೂ ಸುಳಿಯರು.
ಜೀವನದ ಜಂಜಾಟ,ಕಾನೂನಿನೊಂದಿಗೆ ಗುದ್ದಾಟ,ದುಡಿಮೆಗೆ ಸಂಕಟ,ಅನ್ನಕ್ಕೆ ಪರದಾಟ ಇವೇ ಫಲ ಸಹಾಯಕ್ಕೆ ಒದಗಿದರೆ,ಹಣಿಕಿದರೆ.
ಪ್ರಾಣಕಳೆದುಕೊಂಡ ಜೀವ/ಜನ ಐಹಿಕ ವ್ಯಾಮೋಹ-ವ್ಯಾಪಾರ ಇವುಗಳಿಂದ ದೂರ,ಬದುಕುಳಿದವರು ಇದ್ದರೂ-ಇಲ್ಲದಂತೆ-ಸತ್ತಂತೆ-ನಿಸ್ಸತ್ವರು.
ಹಾಗಾದರೆ ಪರಿಹಾರವಿಲ್ಲವೇ?
ಪ್ರಯತ್ನ,ವಿವೇಕ,ವಿದ್ಯೆ,ಸಂಧಾನ ಅನುಸಂಧಾನ ಎಲ್ಲಾ ಮಂಕು-ಕೊಂಕು-ಕೊಳಕು-ಹುಳುಕು.
ಇದೇ ಈಗಿನ ಸಾಮಾಜಿಕ ವ್ಯವಸ್ಥೆ-ಅವ್ಯವಸ್ಥೆ-ಅನಾಸ್ಥೆ.
ಹಾಗಾದರೆ ಎಲ್ಲ ಪ್ರಜೆಗಳು ಸಂವೇದನಶೀಲವಿಲ್ಲದ-ಗೊಡ್ಡು ಜನವೇ-ರಡ್ಡುಜನವೇ-ಜಿದ್ದುಜನವೇ-ಜಡ್ಡುಜನವೇ?
ಹೃದಯವಂತರೇ ಎಲ್ಲರೂ ಆದರೆ ಬಳಕೆ-ಸದ್ಬಳಕೆಯಾಗದೇಬವಣೆಯಾದುದರಿಂದ-ದೂರಸರಿಯುತ್ತಾರೆ.
ಪರಿಹಾರಕ್ಕೆ-“ಪ್ರೊತ್ಸಾಹ-ಇನ್ಸೆಂಟಿವ್”-ಇದ್ದರೆ ಪರಿಸ್ಥಿತಿ ಉತ್ತಮಗೊಳ್ಳದೇ?
ಇನ್ಸೆಂಟಿವ್ ನಿಂದ-ಸೆನ್ಸಿಟಿವ್ ಸಾಧ್ಯ.
ಬೆಂಬಲ ಹಂಬಲಕ್ಕೆ ಹಲವುಬಲ,ಸದಾಬಲ.
ನಾವುಕೇಳುತ್ತೇವೆ,ಓದುತ್ತೇವೆ,ನೋಡುತ್ತೇವೆ-ಪೋಲಿಸ್ ಜನಕ್ಕೆ-ಅವರಕತ9ವ್ಯವಿದ್ದರೂ ಕಳ್ಳರನ್ನು ಹಿಡಿದದಕ್ಕೆ ಭಕ್ಷೀಸು,ಪದೋನ್ನತಿ ಇತ್ಯಾದಿ.
ಸೇನಾಜನಕ್ಕೆ ಕಾಯಕವೇ ಸಿಂಧುವಿದ್ದರೂ ಅಸಮಾನ್ಯಜಯಕ್ಕೆ ಇನ್ನಿಲ್ಲದ ಮೆರಗು-ಮೇರುತನ.
ಜನಸಾಮಾನ್ಯರು-ಅಲ್ಲಿ ಮಾನ್ಯರಿದ್ದಾರೆ,ಸನ್ಮಾನ್ಯರಿದ್ದಾರೆ,ಅಸ್ಮಾನ್ಯರು ಇದ್ದಾರೆ ಇವರು ತಮ್ಮದಲ್ಲದ್ ಕೆಲಸದಲ್ಲಿ ಮೇರುತನ,ಧೀರತನ ಹಾಜರು ಪಡಿಸಿದರೆ-ಕೇವಲ ಶಹಬ್ಬಾಸ್ ಗಿರಿ!
ಹೊಟ್ಟೆಗೆ ಹಿಟ್ಟಿಲ್ಲ-ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಯಿದ್ದಂತೆ-ಈ ನಡೆ ನುಡಿ.
ಹಾಗಾಗಿ ಯಾರಿದಕ್ಕೆ ದುಡಿಯುತ್ತ್ತಾರೆ-ದಣಿಯುತ್ತಾರೆ-ನೀವೇ ಹೇಳಿ ಓದುಗ ದೊರೆಗಳೇ.
ಇದು ಸತ್ಯಾತ್ ಸತ್ಯ-ಇದೇ ಪರಮಸತ್ಯ.
ಚಿಂತೆ ಹೋಗಿ -ಚಿಂತನ ನೆಲೆ ನಿಂತರೆ-ಕ್ಷೇಮ.
ಇಲ್ಲವಾದರೆ ಕ್ಷಾಮವಲ್ಲವೇ?
ಆಟ-ಓಟ-ನೋಟ-ಕೂಟ ಇಲ್ಲೆಲ್ಲಾ ಮೆರದವರಿಗೆ-ಇನ್ನಿಲ್ಲದ-“ಕ್ರೆಡಿಟ್”.
ವಿದ್ಯಾಭ್ಯಾಸ,ಕೆಲಸ,ಪದೋನ್ನತಿ,ಪರದೇಶಪ್ರವಾಸ-ಏನೀ ವರದಾನಗಳು-ದಾನಗಳು.
ಸಾಮಾನ್ಯ ನಾಗರಿಕರಿಗೆ ಅಮೋಘಸೇವೆಗೆ ಏನಿದೆ ಮಯಾ9ದೆ-“ಕ್ರೆಡಿಟ್”?
ಆ ಜನಕ್ಕೆ “ಡೆಬಿಟ್”-ಅದೇ ವರವಲ್ಲ ವರಾತ.
ಪರಾತ್ಪರದ ಮಾತು-ತ್ರಿಕರಣ ಶುದ್ಧಿ-“ಇಛ್ಚಾ-ಕ್ರಿಯಾ-ಜ್ನಾ~ನ”-ಇವೇ ಸೇವೆಗೆ ಚನ್ನ-ಚಿನ್ನ.
ರಸ್ತೆ ಅಪಘಾತ-ಹಾನಿಗೆ ತಡೆ ಒಂದೇ ಉಪಾಯ-ಅದೇ-
“ಥಿಂಕಿಂಗ್ ಔಟ್ ಆಫé್ ಬಾಕ್ಸ್”.
ಅಪಘಾತದ ಮೊದಲಿನ 30 ರಿಂದ 60 ನಿಮಿಷಗಳನ್ನು ಜೀವ ಬದುಕುಳಿಯಲು-ಉಳಿಸಲು-“ಗೋಲ್ಡನ್ ಅವರ್” ಎನ್ನುತ್ತಾರೆ ವೃತ್ತಿ ಪರಿಣಿತರು.
ಇದನ್ನು ಸಾಧಿಸಲು-“ಗೋಲ್ಡನ್ ಗಿಫé್ಟ್”-ಬೇಡವೇ?
ಇದೇ ಈ ಪ್ರಸ್ತುತಿಯ-“ಗೋಲ್ಡ್-ಬೋಲ್ಡ್”-ಚಿಂತನ-ಮಂಥನ.
ಮಹನೀಯರಾದ ಓದುಗಪ್ರಭುಗಳು ಚಚಿ9ಸಲಿ-ಚಿಂತಿಸಲಿ-ಚುರುಕುಮುಟ್ಟಿಸಲಿ.
ಅಲ್ಲಿಗೆ ಎಲ್ಲಾಸರಿ.
ಇನ್ನಿಲ್ಲ ಯಾವ ವರಿ.
ದ್ವಾಪರಯುಗದಲ್ಲಿ ಭಗವಂತ ಹೇಳಿದ-
“ಕಮ9ಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ”-ಎಂತ.
ಯುಗ ಕಳೆಯಿತು-ಕಲಿ ಬಂದಿತು-ಕಳೆಬಂದಿತು.
“ಈಕ್ವಲ್ ವಕ್9 ಈಕ್ವಲ್ ವೇಜಸ್”.
ಈ ಮೆಸೇಜ್ ಪರಿಣಾಮಕಾರಿ-ಉಪಕಾರಿ-ಪರೋಪಕಾರಿ.
ಪರೋಪಕಾಥ9ಮಿದಂ ಶರೀರಂ-ಶರೀರಿಗೆ ಸಲ್ಲಲಿ ಸದಾ ಸಂಭಾವನೆ-ಭಾವನೆಗೆ ಉದ್ದೀಪನ-ಉಮೇದು.
ಆರ್.ಎಂ.ಶರ್ಮ
 

LEAVE A REPLY

Please enter your comment!
Please enter your name here