ಪಾವ್ ಭಾಜಿ

0
267

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಮೂರು ಪಾವ್, ಬೇಯಿಸಿದ ತರಕಾರಿಗಳು (ಎರಡು  ಆಲುಗಡ್ಡೆ, ಒಂದು ಬೀಜ ತೆಗೆದ ಕಾಪ್ಸಿಕಂ, ಒಂದು ಕ್ಯಾರೆಟ್, 7–8 ಬೀನ್ಸ್, ಐದಾರು ಎಸಳು ಹೂ ಕೋಸು, ಒಂದು ಹಿಡಿ ಬಟಾಣಿ), ಕರಿಯಲು ಎಣ್ಣೆ , ಜೀರಿಗೆ, ಒಂದು ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ  ಹಚ್ಚಿದ ಈರುಳ್ಳಿ, ಒಂದು ಹೆಚ್ಚಿದ ಟೊಮೆಟೋ, ಪಾವ್ ಭಾಜಿ ಮಸಾಲ ಸ್ವಲ್ಪ, ಅರಿಷಿಣ, ಉಪ್ಪು, ಖಾರದಪುಡಿ, ನಿಂಬೆರಸ, ಕೊತ್ತುಂಬರಿ ಸೊಪ್ಪು, ಅಲಂಕರಿಸಲು ಬೆಣ್ಣೆ .
 
 
ಮಾಡುವ ವಿಧಾನ:
ಮೊದಲಿಗೆ ಮೇಲೆ ಹೇಳಿದ ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಿ ನಂತರ ಮಸೆದಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ. ಸ್ವಲ್ಪ ಬೆಣ್ಣೆ ಹಾಕಿ ಕಾದನಂತರ ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ಹಾಕಿ. ನಂತರ ಈರುಳ್ಳಿ, ಟೊಮೆಟೊ ಹಾಕಿ ಚನ್ನಾಗಿ ಬಾಡಿಸಿ. ಅದಕ್ಕೆ ಅರಿಷಿಣ,ಉಪ್ಪು ಖಾರದಪುಡಿ, ಪಾವ್ ಭಾಜಿ ಮಸಾಲ, ಬೇಯಿಸಿ ಮಸೆದ ತರಕಾರಿಗಳನ್ನು ಹಾಕಿ. ಸ್ವಲ್ಪ ನೀರು ಹಾಕಿ ಚನ್ನಾಗಿ ಕುದಿಸಿ. ಕೊನೆಗೆ ನಿಂಬೆರಸ, ಕೊತ್ತುಂಬರಿ ಸೊಪ್ಪು ಹಾಗೂ ಬೆಣ್ಣೆಯಿಂದ ಅಲಂಕರಿಸಿ. ಪಾವ್‌ ಮಧ್ಯ ಸೀಳಿಕೊಂಡು ಕಾದ ತವಾದ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಹೊರ-ಒಳ ಭಾಗವನ್ನು ಬಿಸಿ ಮಾಡಿ ಭಾಜಿಯೊಂದಿಗೆ ಸವಿಯಲು ಕೊಡಿ. ಇದರ ಜೊತೆಗೆ ನಂಚಿಕೊಳಲು ಚಿಕ್ಕದಾಗಿ ಹೆಚ್ಚಿದ ಈರುಳಿ ಕಡ್ಡಾಯವಾಗಿರಬೇಕು.

LEAVE A REPLY

Please enter your comment!
Please enter your name here