ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕ್ ಜನರೇ ಅಲ್ಲಿನ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಅಲ್ಲಿನ ಜನ ತಮ್ಮ ಸರ್ಕಾರದಿಂದ ಉತ್ತರ ಬಯಸಿದ್ಧಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಬಟಿಂಡಾದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು ಪಾಕ್ ಜನರು ಪಾಕಿಸ್ತಾನ ಸರ್ಕಾರಗಳ ಕ್ರಮಗಳ ಬಗ್ಗೆ ಉತ್ತರ ಕೇಳಿದ್ದಾರೆ. ಯುದ್ಧೋತ್ಸಾಹ ಪ್ರಕಟಿಸುತ್ತಿರುವುದಕ್ಕೆ ಬೇಸತ್ತಿದ್ದಾರೆ.
ಹೋರಾಡುವುದಾದರೆ ಬಡತನದ ವಿರುದ್ಧ ಹೋರಾಡಿ. ಖೋಟಾನೋಟುಗಳ ವಿರುದ್ಧ ಹೊರಾಟ ನಡೆಸಿ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಿಂಧು ನದಿ ನೀರುಹಂಚಿಕೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ ಹಕ್ಕಿನ ನೀರು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪಂಜಾಬ್ ನ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು ಎಂದಿದ್ದಾರೆ.