ಪಾಕ್ ನಿಂದ ಉ.ಕೊರಿಯಾಕ್ಕೆ ಅಣ್ವಸ್ತ್ರ ಪೂರೈಕೆ

0
605

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಕೊರಿಯಾಗೆ ಪಾಕ್ ನಿಂದ ಪರಮಾಣು ಉತ್ಪನ್ನ ಸಾಗಣೆ ಮಾಡಿದ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಯೊಂದರ ಉನ್ನ ತ ಮೂಲಗಳಿಂದ ವರದಿಯಾಗಿದೆ. ಅಣ್ವಸ್ತ್ರಗಳನ್ನು ಹಾಗೂ ಹಾಗೂ ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಮಾರಾಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
 
ಪಾಕಿಸ್ತಾನದ ಇಂಧನ ಆಯೋಗದಿಂದ ನಿಷೇಧಿತ ಮೊನೆಲ್, ಇನ್ಕೊನೆಲ್ ಉತ್ಪನ್ನಗಳ ಸರಬರಾಜು ಮಾಡಲಾಗಿದೆ. ವಿಶ್ವಸಂಸ್ಥೆ ದಿಗ್ಬಂಧನದ ನಡುವೆಯೂ ಪಾಕ್ ಉತ್ಪನ್ನಗಳನ್ನು ಸರಬರಾಜು ಮಾಡಿದೆ.
 
 
2012 ರಿಂದ 2015ರ ಅವಧಿಯಲ್ಲಿ ಇರಾನ್​ನ ತೆಹ್ರಾನ್​ನಲ್ಲಿರುವ ಉತ್ತರ ಕೊರಿಯಾ ರಾಯಭಾರಿಗಳು 8 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಣ್ವಸ್ತ್ರ ವಹಿವಾಟಿನ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.
 
 
ಪಾಕ್ ಗೆ ವಿಶ್ವಸಂಸ್ಥೆ, ಪರಮಾಣು ಉತ್ಪನ್ನಗಳನ್ನು ಪೂರೈಸದಂತೆ ದಿಗ್ಬಂಧನ ಮಾಡಿತ್ತು. ಅಲ್ಲದೆ ಉತ್ತರಕೊರಿಯಾಗೆ ಯಾವುದೇ ರಾಷ್ಟ್ರ ಪರಮಾಣು ಉತ್ಪನ್ನಗಳನ್ನು ಪೂರೈಸದಂತೆ ಎಚ್ಚರಿಕೆ ನೀಡಿತ್ತು.

LEAVE A REPLY

Please enter your comment!
Please enter your name here