ಪಾಕ್ ನಲ್ಲೂ ಹಳೆ ನೋಟು ಬ್ಯಾನ್ ಗೆ ಚಿಂತನೆ

0
370

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಹಳೆನೋಟು ಬ್ಯಾನ್ ನೀತಿಯನ್ನು ಪಾಕಿಸ್ತಾನ ಕೂಡ ಅನುಸರಿಸುತ್ತಿದೆ. ಭಾರತದಲ್ಲಿ ಹಳೆಯ 500, 1000 ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆದ ಬೆನ್ನಲ್ಲೆ ಈಗ ಪಾಕಿಸ್ತಾನವೂ ಗರಿಷ್ಟ ಮುಖಬೆಲೆಯ 5,000 ರೂ. ನೋಟುಗಳನ್ನು ನಿಷೇಧಿಸಲು ಮುಂದಾಗುತ್ತಿದೆ.
 
 
 
5,000 ರೂ. ನೋಟು ನಿಷೇಧ ಸಂಬಂಧ ಪಾಕಿಸ್ತಾನದ ಸೆನೆಟ್ ನಿಲುವಳಿಯೊಂದನ್ನು ಪಾಸ್ ಮಾಡಿದೆ. ಪಾಕಿಸ್ತಾನ ಮುಸ್ಲಿಮ್ ಲೀಗ್‍ನ ಸದಸ್ಯ ಉಸ್ಮನ್ ಸೈಫ್ ಉಲ್ಲಾ ಖಾನ್ ನಿಲುವಳಿಯನ್ನು ಮಂಡಿಸಿದ್ದು, ಮೇಲ್ಮನೆಯ ಹೆಚ್ಚಿನ ಸದಸ್ಯರು ನಿಲುವಳಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಕಪ್ಪುಹಣವನ್ನು ಸಂಪೂರ್ಣವಾಗಿ ತಡೆಗಟ್ಟಲು ಹಾಗೂ ಆರ್ಥ ವ್ಯವಸ್ಥೆಯನ್ನು ಮೇಲೆತ್ತಲು ಈ ನಿಲುವಳಿಯನ್ನು ಮಂಡಿಸಲಾಗಿದೆ.

LEAVE A REPLY

Please enter your comment!
Please enter your name here