ಪಾಕ್ ನಲ್ಲಿ ಹಿಂದೂ ಗಳಿಗೆ ಅವಮಾನ

0
343

 
ವರದಿ: ಲೇಖಾ
ಓಂ ಚಿಹ್ನೆಯಿರುವ ಶೂಗಳ ಮಾರಾಟ
ಪಾಕಿಸ್ತಾನದಲ್ಲಿ ಹಿಂದೂ ಧರ್ಮಿಯರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾದಲಾಗುತ್ತಿದೆ. ಇಲ್ಲಿನ ಸಿಂದ್‌ ಪ್ರಾಂತ್ಯದಲ್ಲೀ ಹಿಂದೂ ಧರ್ಮದ ಪವಿತ್ರ ಓಂ ಚಿಹ್ನೆ ಇರುವ ಶೂ ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಅಲ್ಲಿನ ಹಿಂದೂಗಳಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
 
 
 
ಸಿಂಧ್‌ ಪ್ರಾಂತ್ಯದಲ್ಲಿನ ಚಪ್ಪಲಿ ಅಂಗಡಿಗಳಲ್ಲಿ ‘ಓಂ’ ಚಿಹ್ನೆ ಇರುವ ಶೂಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಹಿಂದೂಗಳು ತಮ್ಮ ಧರ್ಮ ನಿಂದನೆ ಮಾಡಲಾಗುತ್ತಿದೆ ಎಂದು ಹಿಂದೂ ಪರಿಷತ್‌ ಗಮನಕ್ಕೆ ತಂದಿರುವುದಾಗಿ ತಿಳಿದು ಬಂದಿದೆ.
 
 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಪರಿಷತ್‌ ಪ್ರಧಾನ ಪೋಷಕ ರಮೇಶ್‌ ಕುಮಾರ್‌, ಈದ್‌ ಉಲ್‌ ಅಝಾ ಸಂದರ್ಭದಲ್ಲಿ ಹಿಂದೂಗಳ ಪವಿತ್ರ ಓಂ ಧಾರ್ಮಿಕ ಚಿಹ್ನೆ ಇರುವ ಶೂಗಳನ್ನು ಸಿಂಧ್‌ ಪ್ರಾಂತ್ಯದ ತಾಂಡೋ ಆದಮ್‌ ಖಾನ್‌ ಪ್ರದೇಶದಲ್ಲಿನ ಪಾದರಕ್ಷೆ ಮಾರಾಟಗಾರರು ಮಾರುತ್ತಿರುವುದು ಅತ್ಯಂತ ದುರದೃಷ್ಟಕರ, ಈ ಮೂಲಕ ಹಿಂದೂ ಬಾಂಧವರನ್ನು ಅವಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
 
 
ಪಾಕ್ ನಲ್ಲಿ ಇಸ್ಲಾಮ್‌ಗೆ ಸಂಬಂಧಿಸಿದಂತೆ ಧರ್ಮ ನಿಂದನೆಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅಲ್ಪಸಂಖ್ಯಾತ, ಅನ್ಯ ಧರ್ಮೀಯರಿಗೆ ಸಂಬಂಧಿಸಿದಂತೆ ಎಸಗಲಾಗುವ ಧರ್ಮನಿಂದನೆಗೆ ಯಾವ ಶಿಕ್ಷೆಯನ್ನೂ ನೀಡಲಾಗುತ್ತಿಲ್ಲ, ಬದಲಾಗಿ ಯಾವ ಕ್ರಮಗಳನ್ನೂ ಕೈಗೊಳ್ಳುವಲ್ಲಿ ಗಮನ ಹರಿಸುತ್ತಿಲ್ಲ ಎಂಬುದು ವಿಪರ್ಯಾಸ.

LEAVE A REPLY

Please enter your comment!
Please enter your name here