ಪಾಕ್ ಗೆ ಮುಜುಗರಕ್ಕೆ ತಂದಿಟ್ಟ ಮಾಜಿ ಭದ್ರತಾ ಸಲಹೆಗಾರ

0
529

ರಾಷ್ಟ್ರೀಯ ಪ್ರತಿನಿಧಿ ವರದಿ
ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿಗಳೇ ನಡೆಸಿದ್ದು ಎಂದು ಪಾಕಿಸ್ತಾನ ಮಾಜಿ ಭದ್ರತಾ ಸಲಹೆಗಾರ ಜನರಲ್ ಮಹಮುದ್ ಅಲಿ ದುರಾನಿ ಹೇಳಿದ್ದಾರೆ.
 
 
 
ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ಕೇಂದ್ರದಲ್ಲಿ ನಡೆಯುತ್ತಿರುವ 19ನೇ ಏಷ್ಯಾ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಮಹಮುದ್ ಅಲಿ ದುರಾನಿ, 2008ರ ನವೆಂಬರ್ 26ರಂದು ನಡೆದ ಮುಂಬೈ ಮೇಲೆ ನಡೆದ ಉಗ್ರ ದಾಳಿ ಪಾಕಿಸ್ತಾನ ಮೂಲದ ಉಗ್ರರಿಂದ ನಡೆದಿದ್ದು, ಇದೊಂದು ಸಾಂಪ್ರದಾಯಿಕ ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಿದ್ದಾರೆ.
 
 
 
ಪಾಕಿಸ್ತಾನ ಮಾಜಿ ಸಲಹೆಗಾರರೊಬ್ಬರು ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಉಗ್ರರ ಕೈವಾಡದ ಕುರಿತು ಮಾತನಾಡಿರುವುದು ಇದೇ ಮೊದಲಾಗಿದ್ದು, ದುರಾನಿ ಹೇಳಿಕೆ ಇದೀಗ ಪಾಕಿಸ್ತಾನ ಸರ್ಕಾರದ ಮುಜುಗರಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here