ಪಾಕ್ನಿಂದ ಹೊಸ ಕ್ಯಾತೆ!

0
3936

ಇಸ್ಲಾಮಾಬಾದ್: ಮುಂಬಯಿಯಲ್ಲಿರುವ ಜಿನ್ನಾ ಹೌಸ್‌ ಪಾಕಿಸ್ತಾನದ ಸ್ವತ್ತು, ಅದನ್ನು ಭಾರತೀಯ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದನ್ನ ಪಾಕ್ ಒಪ್ಪುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಹೇಳಿಕೆ ನೀಡಿದ್ದಾರೆ.
ಜಿನ್ನಾ ಹೌಸ್‌ ಸಿಕ್ಕರೆ ಕರ್ತಾರ್ಪುರ ಭೂಭಾಗ ವನ್ನು ಭಾರತಕ್ಕೆ ಹಸ್ತಾಂತರಿಸುವಿರಾ? ಎಂಬ ಭಾರತದ ಪ್ರಶ್ನೆಗೆ ಉತ್ತರಿಸಿರುವ ಪಾಕ್ “ಅದು ಸಾಧ್ಯವಿಲ್ಲ. ಕರ್ತಾರ್ಪುರ ಕಾರಿಡಾರ್‌ ಯೋಜನೆ ಉಭಯ ದೇಶಗಳ ಜಂಟಿ ಯೋಜನೆಯಾಗಿದ್ದು ಅದಕ್ಕೆ ಜಿನ್ನಾ ಹೌಸ್‌ ಪ್ರಕರಣ ಥಳುಕು ಹಾಕುವ ಅವಶ್ಯವಿಲ್ಲ.” ಎಂದಿದೆ ಆದರೆ ಪಾಕ್ ವಾದವನ್ನ ತಳ್ಳಿ ಹಾಕಿರುವ ಭಾರತ ಪಾಕ್ ವಾದದಲ್ಲಿ ಹುರುಳಿಲ್ಲ ಎಂದಿದೆ.

LEAVE A REPLY

Please enter your comment!
Please enter your name here