ಪಾಕಿಸ್ತಾನ ಭಯೋತ್ಪಾದನಾ ರಾಷ್ಟವಾಗಿದೆ

0
224

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ವಿರುದ್ಧ ಯುದ್ಧ ಅಪರಾಧಗಳನ್ನು ನಡೆಸುವ ಮೂಲಕ ಉಗ್ರತ್ವವನ್ನು ಪ್ರಚೋದಿಸುತ್ತಿರುವ ನೀತಿಯನ್ನು ಪಾಕಿಸ್ತಾನ ಹೊಂದಿದ್ದು, ಪಾಕಿಸ್ತಾನ ಭಯೋತ್ಪಾದನಾ ರಾಷ್ಟವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಗುರುವಾರ ಹೇಳಿದೆ.
 
 
ವಿಶ್ವಸಂಸ್ಥೆಯ 71ನೇ ಯುಎನ್ ಜಿಎ ಮಹಾಸಭೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಕಾರ್ಯದರ್ಶಿ ಏನಮ್ ಗಂಭೀರ್ ಅವರು, ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕರು ಅಲ್ಲಿನ ಸರ್ಕಾರದ ಬೆಂಬಲದೊಂದಿಗೆ ಪಾಕಿಸ್ತಾನದ ಬೀದಿ-ಬೀದಿಗಳಲ್ಲಿ ಮುಕ್ತವಾಗಿ ಸಂಚರಿಸಿ ತಮ್ಮ ಭಯೋತ್ಪಾದನಾ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪಾಕಿಸ್ತಾನ ಅಪರಾಧ ಕೃತ್ಯಗಳನ್ನು ಎಸಗುವುದನ್ನೇ ತನ್ನ ರಾಷ್ಟ್ರೀಯ ನೀತಿಯಾಗಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here