ಪಳ್ಳತ್ತಡ್ಕ ಹವ್ಯಕ ವಲಯದ ಮಾಸಿಕ ಸಭೆ

0
346

 
ವರದಿ: ಗೋವಿಂದ ಬಿ ಜಿ
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ಹವ್ಯಕ ವಲಯದ ಮಾಸಿಕ ಸಭೆಯು ಆ.7 ರವಿವಾರ ಪತ್ತಡ್ಕ ಗಣಪತಿ ಭಟ್ ರ ಮನೆಯಲ್ಲಿ ಜರಗಿತು.
 
 
 
ಶಂಖನಾದ ಗುರು ವಂದನೆ ಯೊಂದಿಗೆ ಗುಣಾಜೆ ರಾಮಕೃಷ್ಣ ಭಟ್ ಇವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು . ಕಾರ್ಯದರ್ಶಿ ಕೇಶವ ಶರ್ಮ ಕೋರಿಕ್ಕಾರು ಗತಸಭೆಯ ವರದಿಯನ್ನಿತ್ತರು.
 
 
 
ಬೆಂಗಳೂರು ಗಿರಿನಗರ ರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಗುರುಗಳ ಗೋಚಾತುರ್ಮಾಸ್ಯದ ನಿಮಿತ್ತ ನಡೆಯುವ ವಲಯ ಭಿಕ್ಷಾಸೇವೆಯಲ್ಲಿ ಎಲ್ಲಾ ಗುರುಭಕ್ತರು ಭಾಗವಹಿಸುವಂತೆ ಕೋರಲಾಯಿತು.
 
 
 
ಕಾಸರಗೋಡು ವಲಯದ ನೇತೃತ್ವದಲ್ಲಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ ಮತ್ತು ಶ್ರೀ ವರ ಮಹಾಲಕ್ಷ್ಮಿ ವ್ರತಾಚರಣೆ ಪೂಜೆಯು ಕಾಸರಗೋಡು ಹವ್ಯಕ ಭವನದಲ್ಲಿ ನಡೆಯಲಿದ್ದು ಆ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರವನ್ನು ಕೋರಲಾಯಿತು. ಗುರಿಕ್ಕಾರರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಘಿಕ ರಾಮತಾರಕ ಜಪ ಶಾಂತಿಮಂತ್ರ ಶಂಖನಾದ ದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here