ಪರ್ವತಾರೋಹಿ ಜಂಕೊ ತಾಬೆ ಇನ್ನಿಲ್ಲ

0
226

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದ ಮೊದಲ ಮಹಿಳೆ ಜಪಾನಿನ ಪರ್ವತಾರೋಹಿ ಜಂಕೊ ತಾಬೆಗೆ ವಿಧಿವಶರಾಗಿದ್ದಾರೆ.
 
 
77 ವರ್ಷದ ಜಂಕೊ ತಾಬೆ 70 ದೇಶಗಳ ಎತ್ತರದ ಪರ್ವತಗಳನ್ನು ಹತ್ತಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಪರ್ವತಾರೋಹಣೆಗೆ ಮೀಸಲಿರಿಸಿದ್ದರು. 1969 ರಲ್ಲಿ ಪರ್ವತಾರೋಹಿಗಳ ಲೇಡಿಸ್ ಕ್ಲಬ್ ಸೇರಿದ ಜಂಕೋ, ಮೇ 16, 1975ರಲ್ಲಿ ಮೌಂಟ್ ಎವೆರೆಸ್ಟ್ ಹತ್ತಿ ವಿಶ್ವ ದಾಖಲೆ ಮಾಡಿದ್ದರು.
 
 
ಆ ನಂತರದಿಂದ 1992ರಲ್ಲಿ ಏಳು ಖಂಡಗಳ ಅತೀ ಎತ್ತರದ ಏಳು ಪರ್ವತಗಳನ್ನು ಹತ್ತಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಂಕೋ ಟೋಕಿಯೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here