ಪರಿಸರ ದಿನಾಚರಣೆ

0
412

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ಸುಂದರವಾದ ಪರಿಸರವಿದ್ದರೆ ಮಾತ್ರ ನಮಗೆ ಶುದ್ಧಜಲ, ಶುದ್ಧ ಗಾಳಿ ಲಭಿಸಲು ಸಾಧ್ಯವಿದೆ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತಿಳಿಸಿದರು.
 
 
ಅವರು ಸೋಮವಾರ ಪರಿಸರ ದಿನಾಚರಣೆಯಂಗವಾಗಿ ಶಾಲೆಯಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ವಿವಿಧ ರೀತಿಯ ಸಸ್ಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ನಮ್ಮ ಪರಿಸರದಲ್ಲಿ ಎಲ್ಲಾ ರೀತಿಯ ಗಿಡಗಳನ್ನು ನೆಟ್ಟುಬೆಳಸಬೇಕು, ಪರಿಸರವನ್ನು ಶುಚಿಯಾಗಿರಿಸಬೇಕು. ಉತ್ತಮ ಜಾತಿಯ ಮರ ಗಿಡಗಳನ್ನು ನೆಟ್ಟು ಬೆಳೆಸಬೇಕು ಹಾಗೂ ಅದರಿಂದ ಸಿಗುವ ಫಲಗಳನ್ನು ನಾವು ಬಳಸುವುದರಿಂದ ನಮಗೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.
ಮಕ್ಕಳು ಹಾಗೂ ಅಧ್ಯಾಪಕರು ವಿವಿಧ ರೀತಿಯ ಗಿಡಗಳನ್ನು ಶಾಲೆಯ ಪರಿಸರದಲ್ಲಿ ನೆಟ್ಟರು.

LEAVE A REPLY

Please enter your comment!
Please enter your name here