ಪರಿಸರ ಜಾಗೃತಿ ಕಾರ್ಯಕ್ರಮ

0
207

ಉಜಿರೆ ಪ್ರತಿನಿಧಿ ವರದಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ‘ಪರಿಸರ ಸಂಘ’ದ ವತಿಯಿಂದ ಸರಕಾರೀ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕೊರಂಜ ಹಾಗೂ ಸರಕಾರೀ ಸಂಯುಕ್ತ ಪ್ರೌಢಶಾಲೆ ಇಲ್ಲಿ ‘ಪರಿಸರ ಜಾಗೃತಿ’ ಕಾರ್ಯಕ್ರಮ ಹಾಗೂ ರಕ್ತದಾನ, ರಕ್ತ ವೃದ್ಧೀಕರಣದ ಬಗ್ಗೆ ಮಾಹಿತಿ ಕಾರ್ಯಕ್ರಮ 18-08-2016ನೇ ಗುರುವಾರದಂದು ನಡೆಯಿತು.
 
ಎಸ್.ಡಿ.ಎಮ್. ಕಾಲೇಜಿನ ಅಚಿತಿಮ ಬಿ.ಎಸ್ಸಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡಿ, ಔಷಧೀಯ ಸಸ್ಯಗಳ ಉಪಯೋಗ, ಸಂರಕ್ಷಣೆಯನ್ನು ಮನವರಿಕೆ ಮಾಡಿದರು. ಇದಲ್ಲದೇ ರಕ್ತದಾನದ ಮಹತ್ವ, ರಕ್ತದ ಗುಂಪು ವರ್ಗೀಕರಣದ ಬಗೆಯನ್ನು ವಿವಿಧ ಚಟುವಟಿಕೆಗಳ ಮೂಲಕ ತೋರಿಸಿ, ಆ ಮಕ್ಕಳಿಗೆ ರಕ್ತದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿದರು. ಶಾಲೆಯ ಮಕ್ಕಳಿಗೆ ಪರಿಸರ ಸಂಬಂಧಿ ಸ್ಪರ್ಧೆಗಳನ್ನು ಮಾಡಿ ವಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
 
ಎಸ್.ಡಿ.ಎಮ್. ಪರಿಸರ ಸಂಘದ ಸಂಯೋಜಕಿ ಶಕುಂತಲಾ ಬಿ. ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಕಾಲೇಜಿನ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಭಾಗವಹಿಸಿದರು. ಸ.ಉ.ಪ್ರಾ.ಶಾಲೆ ಕೊರಂಜ ಹಾಗೂ ಸ.ಸಂ.ಪ್ರಾ.ಶಾಲೆ ಗೇರುಕಟ್ಟೆ ಇಲ್ಲಿಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here