ಪರಿಶ್ರಮಕ್ಕೆ ತಕ್ಕ ಜಯ

0
530

ವರದಿ: ಕವನ.ಜಿ.ನಕಲೇಶಪುರ
ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ತಂಡದ ಸಂಪೂರ್ಣ ಶ್ರಮ ಅಗತ್ಯ ಆದ್ದರಿಂದ ಪಾತ್ರದ ಕುರಿತು ಪೂರ್ಣ ಅರಿತು,ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ನೀಡಿದರೆ ಅದನ್ನು ಒಪ್ಪಿಕೊಳ್ಳುತ್ತಾರೆ. ಹಾಗೆ ರಂಗಿತರಂಗ ಸಿನಿಮಾ ದೇಶ ವಿದೇಶಗಳಲ್ಲಿ ಹೆಸರು ಮಾಡಲು ಜನರೆ ಕಾರಣ ಎಂದು ರಂಗಿತರಂಗ ಸಿನಿಮಾದ ಸಹ ಕಲಾವಿದ ಕಾರ್ತಿಕ್ ಕೊರಳೆ ಹೇಳಿದರು.
 
 
ಇತ್ತಿಚೀಗೆ ಇವರು ಉಜಿರೆ ಶ್ರೀ ಧ.ಮಂ.ಕಾಲೇಜಿನ ತೃತೀಯ ಬಿ.ಎ.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಟನೆ ಕಲಿಯಲು ಆಗಲ್ಲ ಅದು ಸಹಜವಾಗಿ ಬರುವಂತದ್ದು, ಅಭಿನಯದಲ್ಲಿ ಹಾವ-ಭಾವ ಚೆನ್ನಾಗಿರಬೇಕು. ಒಂದು ತಂಡದಲ್ಲಿ ಕೆಲಸ ಮಾಡಬೇಕದರೆ ಎಲ್ಲ ರೀತಿಯ ಪಾತ್ರ ಪರಿಚಯವಾಗುತ್ತದೆ. ಸ್ಕ್ರಿಪ್ಟ್ ಇದ್ದರೆ ನಟನೆ ಸುಲಭವಾಗುತ್ತದೆ ಎಂದರು.
 
 
ಒಂದು ನದಿ ದಾಡುವಾಗ ಎಲ್ಲರೂ ಪ್ರಯಾಣಿಕರೆ ಹಾಗೆ ನಟನೆಯಲ್ಲು ಸಹ ಹಿರಿಯ ಕಲಾವಿದ ಕಿರಿಯ ಕಲಾವಿದ ಎಂಬ ಭೇದ ಭಾವವಿಲ್ಲ ಎಲ್ಲರು ಒಂದೇ. ಎಲ್ಲ ಪಾತ್ರಕ್ಕೂ ಸಮಾನ ಅವಕಾಶವಿದೆ.ಪಾತ್ರ ನಮ್ಮೊಳಗೆ ಬದಲಾಗಬೇಕು ಹಾಗೂ ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
 
ರಂಗಿತರಂಗ ಚಿತ್ರದಲ್ಲಿ ಎಲ್ಲವೂ ಸಹಜವಾಗಿಯೆ ಮೂಡಿ ಬಂದಿದೆ. ಗರ್ಭಿಣಿ ಪಾತ್ರವನ್ನು ಜನ ಒಪ್ಪಿಕೊಂಡರು. ಚಿತ್ರದಲ್ಲಿ ಒಂದೇ ರೀತಿ ಮುಖವಾಡವಿದ್ದರೆ ತರ್ಕವಿರುತ್ತದೆ. ಆದ್ದರಿಂದ ಎಲ್ಲ ರೀತಿ ಮುಖವಾಡ ಬಳಸಲಾಗಿದೆ. ತುಳು ಚಿತ್ರರಂಗದಲ್ಲಿ ಓಳ್ಳೆಯ ನಾಟಕಗಳು ಇದೆ, ಇದನ್ನೆ ಸಿನಿಮಾ ಮಾಡಿದಾಗ ಪ್ರಾದೇಶಿಕ ಕಥೆಗೆ ಓಳ್ಳೆ ಪ್ರಶಂಸೆ ಮೂಡಿಬರುತ್ತದೆ ಎಂದು ಮಾತನಾಡಿದರು.
 
 
ಕಾರ್ಯಕ್ರಮದಲ್ಲಿ ಶ್ರೀ ಧ.ಮಂ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಸಾದ್.ಕೆ.ಪಿ,ಶ್ರೀ ಧ.ಮಂ.ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರಕಾಶ್ ಪ್ರಭು ಹಾಗೂ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರೋ.ಭಾಸ್ಕರ್ ಹೆಗಡೆ ಉಪಸ್ಥಿತರಿದ್ದು. ತೃತೀಯ ಬಿ.ಎ.ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
 

LEAVE A REPLY

Please enter your comment!
Please enter your name here