ವಾರ್ತೆ

ಪರಶುರಾಮ ಕಾಮತ್ರಿಗೆ ಡಾಕ್ಟರೇಟ್

ಉಜಿರೆ ಪ್ರತಿನಿಧಿ ವರದಿ
ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಶುರಾಮ ಕಾಮತ್ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರದಾನ ಮಾಡಿದೆ.
 
 
ಕಾರ್ಪೊರೇಟ್ ಕಮ್ಯುನಿಟಿ ರಿಲೇಶನ್ಸ್ ಆ್ಯಂಡ್ ಇಟ್ಸ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಸ್ : ಎ ಸ್ಟಡಿ ವಿದ್ ಸ್ಪೆಷಲ್ ರೆಫರೆನ್ಸ್ ಟು ದಕ್ಷಿಣ ಕನ್ನಡ (Corporate Community Relations and Its Social Responsibilities: A Study with Special Reference to Dakshina Kannada) ಎಂಬ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ. ವಹೀದಾ ಸುಲ್ತಾನಾ ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ಕೈಗೊಂಡಿದ್ದರು.
 
 
 
ಹೈದರಬಾದ್, ಮಧುರೈ, ಪುನಾ ಮತ್ತು ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಮೈಸೂರಿನ ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಂಪ್ಮೆಂಟ್ ಸಂಸ್ಥೆ 2014ರಲ್ಲಿ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಜಂಟಿ ಪ್ರಬಂಧಕ್ಕೆ ಬೆಸ್ಟ್ ಪೇಪರ್ ಮನ್ನಣೆ ಲಭಿಸಿದೆ. ಅಂತರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನವನ್ನು ಪ್ರಕಟಿಸಿದ್ದಾರೆ.
 
 
 
ಡಾ. ಪರಶುರಾಮ ಕಾಮತ್ ಗುರುವಾಯನಕೆರೆ ನಿವಾಸಿ ಜಿ. ಕೃಷ್ಣ ಕಾಮತ್ ಮತ್ತು ದಿ.ಜಯಲಕ್ಷ್ಮೀ ಕಾಮತ್ಇವರ ಪುತ್ರ. ಗುರುವಾಯನಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತಂಗಡಿಯ ಸಂತ ತೆರೇಸಾ ಪ್ರೌಢಶಾಲೆ, ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿಯಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲಿ ಪ್ರಕಟವಾಗಿವೆ.
 
 
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಜೀವನ ಆರಂಭಿಸಿದ ಕಾಮತ್ ಅವರು ‘ಪತ್ರಿಕೋದ್ಯಮ ಮತ್ತು ಭಾಷಾಂತರ’ ಎಂಬ ಪುಸ್ತಕದ ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here