ಪರಮೇಶ್ವರ್ ವಿರುದ್ಧ ಡಿವಿಎಸ್ ಗರಂ

0
204

ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ಗಲಭೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಪಾತ್ರವಿದೆ ಎಂದು ಆರೋಪಿಸಿದ ಪರಮೇಶ್ವರ್ ಹೇಳಿಕೆಗೆ ಕೇಂದ್ರ ಯೋಜನೆ, ಸಾಂಖಿಕ ಸಚಿವ ಡಿ ವಿ ಸದಾನಂದ ಗೌಡರು ಆಕ್ರೋಶಗೊಂಡಿದ್ದಾರೆ.
 
 
 
ಜವಾಬ್ದಾರಿ ಸ್ಥಾನದಲ್ಲಿರುವವವರು ಇಂತಹ ಹೇಳಿಕೆ ನೀಡಬಾರದು. ಸೂಕ್ತ ಸಾಕ್ಷ್ಯವಿದ್ದರೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಡಿವಿಎಸ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆಸಿದ್ದಾರೆ. ಪ್ರಧಾನಿ, ಆರ್ ಎಸ್ ಎಸ್ ಮೇಲೆ ಆರೋಪ ಮಾಡಲಾಗುತ್ತಿದೆ.
 
 
 
ಕಾವೇರಿ ವಿವಾದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಆರ್‌ಎಸ್‌ಎಸ್‌ ಹಾಗೂ ಅದರ ಅಂಗ ಸಂಸ್ಥೆಗಳ ಪಾತ್ರವಿದೆ ಎಂದು ನಿನ್ನೆ ರಾಜ್ಯ ಗೃಹ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರು ಹೇಳಿಕೆ ನೀಡಿದ್ದರು.

LEAVE A REPLY

Please enter your comment!
Please enter your name here