ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕಬೇಕು

0
447

ಬೆಂಗಳೂರು ಪ್ರತಿನಿಧಿ ವರದಿ
ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹಾಗೂ ಹಿರಿಯ ನಿರ್ಮಾಪಕ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.
 
 
ಕನ್ನಡ ಚಿತ್ರರಂಗದ ಸ್ಥಿತಿಗತಿ ಬಗ್ಗೆ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಿರ್ಮಾಪಕರು ಉಳಿದರೆ ಚಿತ್ರರಣಗ ಉಳಿತಯುತ್ತದೆ ಎಂದು ಬಂದೆ. ಇದೇ ಕಾರಣಕ್ಕೆ ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ ಎಂದು ಹೇಳಿದ್ದಾರೆ.
 
 
ಕನ್ನಡ ಚಿತ್ರ ರಂಗ ಈಗ ತುಂಬಾನೇ ಬದಲಾಗಿದೆ. ಆದರೆ ನಿರ್ಮಾಪಕರು ಪ್ರತಿ ಹಂತದಲ್ಲೂ ಕಷ್ಟ ಅನುಭವಿಸುತ್ತಿದ್ದಾರೆ. ಯುಎಫ್ ಒ ಕ್ಯೂಬ್ ಕಂಪನಿಗೆ ಹಣ ಕಟ್ಟಲು ಆಗುತ್ತಿಲ್ಲ. ಛೇಂಬರ್ ಜತೆ ಮಾತಾಡಿದಾಗ ಸಾಕಷ್ಟು ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಸಿನಿಮಾಗಳು ಬಿಡುಗಡೆಯಾಗಿದೆ. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 700 ಚಿತ್ರಗಳು ಬಿಡುಗಡೆಯಾಗುತ್ತದೆ. 400 ಟಾಕೀಸ್ ನಲ್ಲಿ ಅನ್ಯಭಾಷೆ ಚಿತ್ರಗಳು ಬಿಡುಗಡೆಯಾಗುತ್ತದೆ. ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳಿಗೆ ಕೊನೆಯ ಸ್ಥಾನವಿದೆ. ಈ ಹಿಂದೆ ಕೇವಲ 24 ಟಾಕೀಸ್ ಗಳಲ್ಲಿ ಅನ್ಯಚಿತ್ರ ರಿಲೀಸ್ ಆಗಿದೆ. ಹೀಗಾಗಿ ಪರಭಾಷಾ ಚಿತ್ರಗಳ ಮೇಲೆ ನಿಯಂತ್ರಣ ಅಗತ್ಯವಿದೆ. ಸಿನಿಮಾ ಹೋರಾಟಕ್ಕೆ ನಾನು ಎಂದಿಗೂ ಜೊತೆಯಾಗಿರುತ್ತೇನೆ. ರಾಜ್ಯ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here