ಪಬ್ಲಿಕ್ ನಲ್ಲಿಯೇ ಕಪಾಳಮೋಕ್ಷ!

0
515

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭದ್ರತಾ ಸಿಬ್ಬಂದಿಯೊಬ್ಬ ಟಿವಿ ಪತ್ರಕರ್ತೆ ಕಪಾಳಕ್ಕೆ ಹೊಡೆದ ಅಮಾನವೀಯ ಘಟನೆ ಪಾಕಿಸ್ತಾನ ಕರಾಚಿಯಲ್ಲಿ ನಡೆದಿದೆ.
 
 
ಕೆ-21 ನ್ಯೂಸ್ ಚಾನೆಲ್ ಪತ್ರಕರ್ತೆಗೆ ಲೈವ್ ರಿಪೋರ್ಟ್ ವೇಳೆ ಪಬ್ಲಿಕ್ ನಲ್ಲಿಯೇ ಕಪಾಳಮೋಕ್ಷವಾಗಿದೆ. ಕರಾಚಿಯ ನದ್ರಾ ನೋಂದಣಿ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಲು ಸೈಮಾ ತೆರಳಿದ್ದರು. ಈ ವೇಳೆ ಓರ್ವ ಪೇದೆಯನ್ನು ಮಾತನಾಡಿಸಲು ಯತ್ನಿಸಿದಾಗ ಪತ್ರಕರ್ತೆ ಮೇಲೆ ಹಲ್ಲೆ ನಡೆಸಲಾಗಿದೆ.
 
 
ಪತ್ರಕರ್ತೆ ಸೈಮಾನ ಕನ್ವಾಲ್ ಕೆನ್ನೆಗೆ ಭದ್ರತಾ ಸಿಬ್ಬಂದಿ ಹೊಡೆದಿದ್ದಾನೆ. ಈಗ ಈ ವಿಡಿಯೋ ಪಾಕ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
 

LEAVE A REPLY

Please enter your comment!
Please enter your name here