ಪನ್ನೀರ್-ಮೋದಿ ಭೇಟಿ

0
373

ರಾಷ್ಟ್ರೀಯ ಪ್ರತಿನಿಧಿ ವರದಿ
ಜಲ್ಲಿಕಟ್ಟಿಗೆ ಒತ್ತಾಯಿಸಿ ಮರೀನಾ ಬೀಚಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಹತ್ವದ ಬೆಳವಣಿಗೆಯಲ್ಲಿ ಇಂದು ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
 
 
ಪ್ರತಿಭಟನೆ ಆರಂಭವಾಗಿ ಮೂರು ದಿನಗಳಾದರೂ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಚೆನ್ನೈನ ಮರೀನಾ ಬೀಚಿನಲ್ಲೇ ಬೀಡುಬಿಟ್ಟಿದ್ದಾರೆ. ಇಲ್ಲಿ ಜಲ್ಲಿಕಟ್ಟು ನಡೆಯಬೇಕು ಎಂದು ಒತ್ತಾಯಿಸಿ ಸಾವಿರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಜಲ್ಲಿಕಟ್ಟು ನಿಷೇಧಿಸಬಾರದು ಎಂದು ಒತ್ತಾಯಿಸಿದ್ದಾರೆ.
 
 
ಪ್ರಧಾನಿ ಭರವಸೆ ನೀಡಿದ್ದಾರೆ: ಸೆಲ್ವಂ
ಜಲ್ಲಿಕಟ್ಟು ತಮಿಳುನಾಡಿನ ಪುರಾತನ ಸಂಪ್ರದಾಯವಾಗಿದೆ. ಈ ಪುರಾತನ ಸಂಪ್ರದಾಯದ ಬಗ್ಗೆ ಪ್ರಧಾನಿಗೆ ವಿವರಿಸಿದ್ದೇನೆ. ಪ್ರಧಾನಿ ಮೋದಿ ತಮಿಳುನಾಡಿನ ಭಾವನೆಗಳನ್ನು ಅರಿತಿದ್ದಾರೆ. ನಮ್ಮ ಭಾವನೆಗಳ ಬಗ್ಗೆ ಪ್ರಧಾನಿ ಸಹಾನುಭೂತಿ ಹೊಂದಿದ್ದಾರೆ. ತುರ್ತು ಸುಗ್ರೀವಾಜ್ಞೆ ಹೊರಡಿಸುವ ಅಗತ್ಯದ ಬಗ್ಗೆ ವಿವರಿಸಿದೆ. ತಮಿಳುನಾಡಿನ ಜನರ ಭೇಡಿಕೆ ಪರಿಗಣನೆ ಮನವಿ ಮಾಡಿದೆ. ಜಲ್ಲಿಕಟ್ಟು ಅನುಮತಿಸಲು ಸುಗ್ರೀವಾಜ್ಞೆ ಜಾರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಸಂಸ್ಕೃತಿ, ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ.ಈ ಬಗ್ಗೆ ಪ್ರಧಾನಿಯವರು ಪಾರಂಪರಿಕೆ ಕ್ರೀಡೆಯನ್ನು ಪ್ರೋತ್ಸಾಹಿಸುವ ಭರವಸೆ ನೀಡಿದ್ದಾರೆ.
ಜಲ್ಲಿಕಟ್ಟು ಸಂಬಂಧ ನಾನು, ಶಶಿಕಲಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇವೆ ಎಂದು ದೆಹಲಿಯಲ್ಲಿ ತಮಿಳುನಾಡು ಸಿಎಂ ಓ ಪನ್ನೀರ್ ಸೆಲ್ವಂ ಹೇಳಿದ್ದಾರೆ.

LEAVE A REPLY

Please enter your comment!
Please enter your name here