ಪನ್ನೀರ್ ಗೆ ಪಂಚ್ ಕೊಟ್ಟ ಶಶಿಕಲಾ

0
357

ರಾಷ್ಟ್ರೀಯ ಪ್ರತಿನಿಧಿ ವರದಿ
ಶಶಿಕಲಾ ನಟರಾಜನ್ ಜೈಲು ಸೇರುತ್ತಿದ್ದಂತೆ ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂಗೆ ಪಂಚ್ ಕೊಟ್ಟಿದ್ದಾರೆ. ಎಐಎಡಿಎಂಕೆ ಪಕ್ಷದಿಂದ ಪನ್ನೀರ್ ಸೆಲ್ವಂನನ್ನು ಉಚ್ಛಾಟನೆ ಮಾಡಲಾಗಿದೆ. ಪ್ರಾಥಮಿಕ ಸದಸ್ಯತ್ವದಿಂದ ಸೆಲ್ವಂ ಅವರನ್ನು ಉಚ್ಛಾಟನೆ ಮಾಡಲಾಗಿದೆ.
 
ಪನ್ನೀರ್ ಸೆಲ್ವಂ ಮಾತ್ರವಲ್ಲದೆ ಸೆಲ್ವಂ ಜತೆ ಗುರುತಿಸಿಕೊಂಡ ಎಲ್ಲಾ ಸಚಿವರನ್ನು ಪಕ್ಷದಿಂದ ವಜಾ ಮಾಡುವಂತೆ ಶಶಿಕಲಾ ಆದೇಶಿಸಿದ್ದಾರೆ. ಸೆಲ್ವಂ ಬೆಂಬಲಿಸಿದ ಪಾಂಡಿಯನ್, ಮಧುಸೂದನ್ ಸೇರಿದಂತೆ 10 ಮಂದಿ ಶಾಸಕರು, 11 ಮಂದಿ ಶಾಸಕರು ಹಾಗೂ 20 ನಾಯಕರನ್ನು  ಪಕ್ಷದಿಂದ ವಜಾ ಮಾಡಲಾಗಿದೆ.
 
 
ಪನ್ನೀರ್ ನಿವಾಸದಲ್ಲಿ ಸಂಭ್ರಮ
ಶಶಿಕಲಾ ನಟರಾಜನ್ ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ರೇಸಿನಲ್ಲಿದ್ದ ಒ ಪನ್ನೀರ್ ಸೆಲ್ವಂ ಮನೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪನ್ನೀರ್ ಸೆಲ್ವಂ ನಿವಾಸದತ್ತ ಧಾವಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here