ಪದ್ಭ್ಯಾಂ ಶೂದ್ರೋಜಾಯತ!

0
493

ಮಸೂರ ಅಂಕಣ: ಆರ್ ಎಂ ಶರ್ಮ
ತಲೆಬರಹದ ಸರಳ ಗ್ರಹಿಕೆ-ಕಾಲಿನಿಂದ-ಅಥಾ೯ತ್ ಕಾಲಿನಲ್ಲಿ ಶೂದ್ರಜನನ!
ಇಲ್ಲೇನಿದೆ ಕೊಂಡಾಡಲು ಎಂದರೆ ಮುಂದೆ ತಾನೇ ಅನಾವರಣಗೊಳ್ಳುತ್ತದೆ ಎಂತಲೇ ದೃಢ ಉತ್ತರ ನಮ್ಮದು.
ಎಲ್ಲೆಲ್ಲೂ ಯಾವಾಗಲೂ ಕೇಳಿಬರುವ-ಕೇಳಿಸಲ್ಪಡುವ ಒಂದೇ ಘೋಷವಾಕ್ಯ ಎಂದರೆ-
“ನೇತ್ರದಾನ ಮಹಾದಾನ!”
ಇದುಏಕೆ?
ಇದರ ಉತ್ತರವೇಏನು ಗಟ್ಟಿ ಏನು ಟೊಳ್ಳು ಎಂತ ಖಚಿತ ಪಡಿಸುತ್ತದೆ ನಮ್ಮ ಈ ಪ್ರಸ್ತುತಿ.
ಈಗ್ಗೆ ಕೆಲಸಮಯದ ಹಿಂದೆ ನಾವೊಂದು ಸಭೆ-ಸಮಾರಂಭದಲ್ಲಿ ಪಾಲ್ಗೊಂಡಾಗ ಅಲ್ಲಿ ನಡೆದ ವಿದ್ಯಮಾನವೇ ನಮಗೆ ಪ್ರಚೋದಿಸಿ ಈ ಲೇಖನಕ್ಕೆ ಮೂಲವಾಯಿತು.
ಅದೇ ಹರಿಕಾರ ಪರಿಹಾರಕ್ಕೆ.
ಒಂದು ಸವೇ೯ಕ್ಷಣೆಹೇಳುತ್ತದೆ ಭಾರತದಲ್ಲಿ ಸುಮಾರು ೨ರಿಂದ ೨೦ ಲಕ್ಷ ಅಂಧರ ಸಂಖ್ಯೆ ಇದೆ ಎಂತ.
ಇರಲಿ ಅಂದಾಜಿಗೂ ಮುಲಾಜಿರಬೇಡವೇನು?
ಏನಿದರ ಫಲಿತಾಂಶ-೨-೨೦ ಈ ಅಗಾಧ ವ್ಯತ್ಯಾಸ ಸರಿಯೇ ಎಂದರೆ ಅಲ್ಲ ಎಂತಲೇ ನಮ್ಮ ಖಂಡಿತವಾದ ಉತ್ತರ-
ಕಾರಣ ವ್ಯತ್ಯಾಸಕ್ಕೂ ಲೆಕ್ಕವಿದೆ ನಿಖರತೆ ಇದೆ-ಆದರೆ ಇಲ್ಲಿ ಅದು ಇಲ್ಲ ಅದೇ ಸ್ಪಷ್ಟ.
ಭಾರತದಲ್ಲಿ ಪ್ರತಿವಷ೯ ಇ ಕೋಟಿ ಜನ ಸಾವನ್ನಪ್ಪುತ್ತಿದ್ದಾರೆ ಎಂತ ಲೆಕ್ಕವಿದೆ.
ಇದರಲ್ಲಿ ಸುಮಾರು ೨೫೦೦೦ ಜನ ನೇತ್ರದಾನ ಮಾಡುತ್ತಾರಂತೆ.
ಈ ದಾನದ ಸಂಖ್ಯೆ ಏರಿದರೆ-ಏರಿಸಲ್ಪಟ್ಟರೆ ನೇತ್ರಪಡೆಯುವರ ಸಂಖ್ಯೆಯೂ ಬೆಳೆಯುತ್ತದೆ-ಅಂಧತ್ವದ ನಿವಾರಣೆ ಫಲಕಾರಿಯಾಗಲು ಸಾಧ್ಯವಿದೆ.
ಸತ್ಯವಾಗಿಯೂ ಈ ಸಂಗತಿಯು ಸಾಧು-ಸಾಧ್ಯ-ಸಿಂಧು.
ಮೇಳೈಸುವುದು ಅಗತ್ಯ ಅದೇ ಸತ್ಯ.
ನೇತ್ರದಾನಕ್ಕೆ ತಯಾರಿ,ತಿಳುವಳಿಕೆ,ಔದಾಯ೯,ಸಹಾಯ,ಸಹಕಾರ,ಸಾಮಾಜಿಕ ಲವಲವಿಕೆ,ಬದ್ಧತೆ ತೀವ್ರ ಅಗತ್ಯ ಕೂಡಾ.
ಮೂಢನಂಬಿಕೆ-ಸಾವು-ನೋವು-ಸಂಸ್ಕಾರ-ಶವದ ಅಂತ್ಯಕ್ರಿಯೆ ರೀತಿ ರಿವಾಜು ಮೇಲಾಗಿ ಅಲ್ಲಿಯೂ ಸಹಾಯದ ಹಸ್ತ ಇದು ಅಷ್ಟು ಸಲೀಸಲ್ಲ.
ಮೌಢ್ಯ ಮಾತ್ರವೇ ಕಾರಣವೇ ಎಂದರೆ ಬೇರೆಯದನ್ನು ನೋಡುವ-ಕಾಣುವ-ಹುಡುಕುವ ಕೆಲಸ ಮಾಡಬೇಕಲ್ಲ.
ಅದನ್ನು ಮಾಡದೇ -ಮಾಡಿಸದೇ ಕೇವಲ ಸರಾಸರಿ ಲೆಕ್ಕ ಸರಿಗಟ್ಟುತ್ತದೆಯೇ ಏಂದರೆ ಉತ್ತರ -ಅಲ್ಲ.
ಸರಾಸರಿಯಲ್ಲಿ ಲೆಕ್ಕವಿದೆ-ಲಕ್ಶ್ಯವಿಲ್ಲ-ಹಗಾಗಿ ಅದು ಶಕ್ಯವಲ್ಲದ ಶಸ್ತ್ರ-ಶಾಸ್ತ್ರ-ಅಸ್ತ್ರ.
ಇದೇ ಸ್ವಸ್ಥ-ಸ್ಪಷ್ಟ.
ಬದುಕಿದಾಗ ಕಣ್ಣು ಸತ್ತನಂತರವೂ ಕಣ್ಣಾಗಿರಬೇಕು.
ಇದು ಆಸೆಯೇ-ಆಕಾಂಕ್ಷೆಯೆ-ಹೇಗೇ ಇರಲಿ ಉಪಯುಕ್ತ ಇದೇ ಅಭಿಯಾನದ ಮಾನ-ಪ್ರಾಣ.
ಅದರ ಇಲ್ಲದಿರುವಿಕೆಯೇ ನಿತ್ರಾಣ.
ಒಂದು ಚಿಂತನೆ-ನೇತ್ರದಾನಕ್ಕೆ ಬಲ-ಬೆಲೆ-ಬೆಂಬಲ-ಅದನ್ನು ಕಡ್ಡಾಯಗೊಳಿಸುವುದು.
ಇದು ಪ್ರಜಾಪ್ರಭುತ್ವ ಭಾರತದಲ್ಲಿ-ಸಾಧ್ಯವೇ ಎಂದರೆ-ಸಾಧುವೇ ಎಂಬ ಪಾಟೀಸವಾಲೂ ಉತ್ತರವನ್ನು ಬಯಸದೇ?
ಸವಾಲು-ಜವಾಬು-ಜವಬ್ದಾರಿ ಇಲ್ಲದಿದ್ದರೆ ದುಂಬಾಲೇ ಗತಿ.
ಅದೇ ಸಧ್ಯದ ವಸ್ತುಸ್ಥಿತಿ.
ಇದೇ ಇ ಪ್ರಸ್ತುತಿಯ ಆಸ್ತಿ-ಶಕ್ತಿ.
ಈಗ ಪ್ರತಿಸವಾಲು ಇದರ -ಇವುಗಳ ಸರದಿ.
“ಕಾಯೇನಾ——-“-ಇಲ್ಲಿ ಎಲ್ಲ ಇಂದ್ರಿಯಗಳ/ ಅಂಅಗಳ ದೇಣಿಗೆಗಳು ಪರಾತ್ಪರಕ್ಕೆ ಅಪ೯ಣೆ-
“ಸಕಲಂ ನಾರಯಣಾಯ ಸಮಪ೯ಯೇ”-ಎಂಬ ತುಡಿತ-ದುಡಿತ ಉಂಟು.
ಅಲ್ಲಿಗೆ ನೇತ್ರದಷ್ಟೇ ಇನ್ನೂ ಹೆಚ್ಚೂ ಇರಬಹುದು ಅಂಗಾಂಗಳು ಕ್ಷಮತೆ ಹೊಂದಿವೆ ಎಂತಲವ್ವಏ ಸಾರಾಂಶ?
ಮತ್ತೂ ಬೇಕೇನು ಮಿಮಾಂಸ?
ಹಾಗಾದರೆ ಈಗ ನೋಡೋಣ ಕಾಲಿನ-“ಪಾದ”- ಬಗೆಗೆ.
ಪುರುಷಸೂಕ್ತದ ಮಂತ್ರಪಾಠ ಹೇಳುತ್ತದೆ-ಪದ್ಭ್ಯಾಂ ಶೂದ್ರೋ ಜಾಯತ ಎಂತ-
ಅಥಾ೯ತ್-ಶೂದ್ರಜನನ-ಕಾಲಿನಲ್ಲಿ ಎಂತ.
ಕಾಲೆಂದರೆ ಕೀಳೇ ಮೇಲೇ?
ಪಾದ-ಕಾಲು-ಕಾಲೂರಿ,ಕಾಲುನೀಡಿ,ಕಾಲಿಗೆ ಬುದ್ಧಿ,ಕಾಲ್ಗುಣ,ಪಾದುಕಾ ಪಟ್ಟಾಭಿಷೇಕ,ಪದಾಪ೯ಣ,ಪಾದೋದಕ,ಪಾದಪೂಜೆ,ಚರಣದಾಸ,ಪಾದಾರವಿಂದ ಇತ್ಯಾದಿಗಳು,
ಇಂಗ್ಲಿಷ್ ನಲ್ಲಿ-“ಫ಼ುಟ್ ಪ್ರಿಂಟ್,ಫ಼ುಟೇಜ್,ಸೆಟ್ ಫ಼ುಟ್,ಆನ್ ಮೈ ಫ಼ೀಟ್,ಫ಼ುಟ್ ಡೌನ್”-ಇತ್ಯಾದಿಗಳು-
ಪಾದ ಮಹಿಮೆ ಗೆ ಹಿಡಿದ ಕನ್ನಡಿ-ಚನ್ನುಡಿ-ಮುನ್ನುಡಿ-ಸನ್ನುಡಿ.
ಕನ್ನಡ ಮಾತು ಕಳಪೆಗೆ-ಜಮೆಯಿಲ್ಲದಕೆ-ಬೆಲೆಯಿಲ್ಲದಕೆ-ತಿಪ್ಪೆಗೆ ಯೋಗ್ಯವೆನ್ನಲು-
“ಕಾಲಡಿಯ ಕಸ”!
ಆದರೆ ಅಡಿ ಎಂದರೆ ಒಂದಥ೯ದಲ್ಲಿ ಕಾಲು-ಪಾದ ಎಂತಲೂ ವ್ಯಾಖ್ಯೆ ಉಂಟಪ್ಪ-
ಅದಕ್ಕೆ ಈ ಗಾದೆಯೇ ನಿದಶ೯ನ-
“ಐರಾವತವೂ ಅಡಿ ಜಾರುತ್ತದೆ!”
ಪಾದದ ಮಹಿಮೆಗೆ ಪುರಾಣದ ಕೊಡುಗೆಗಳು-
ಹರಿಪಾದ,ಶ್ರೀಪದ,ಮಹಾತಾಯಿ ಗಂಗೆ ವಿಷ್ಣುಪಾದದಿಂದ ಉದ್ಭವಿಸಿದಳು,ಬಲಿಯನ್ನು ಮೆಟ್ಟಲು ವಾಮನ ಬಳಸಿದ ಪಾದ-
ಬಲಿಯ ಮೆಟ್ಟಿ ಸತ್ಪದವಿಯನ್ನಿತ್ತೆ-ಏನೀ ಆಂತಯ೯-ಐಶ್ವಯ೯-ಆಶ್ಚಯ೯ವೇ-ಅಮೋಘವೇ?
ದೇವಪೂಜೆ-ಪ್ರಸಾದ-ತಿಥ೯-“ವಿಷ್ಣೋಃ ಪಾದೋದಕಂ ಸಕಲ ದುರಿತ ನಿವಾರಣಂ-ಕಾಲಿನ ಮಹಿಮೆ.
ನೆಲ ಮೆಟ್ಟಲು-ಮುಟ್ಟಲು ಕಾಲು ಬೇಡವೇ?
ರಾಮನ ಅನುಪಸ್ಥಿತಿಯಲ್ಲಿ ಭರತನ ದೇಣಿಗೆ ರಾಜ್ಯಭಾರಕ್ಕೆ ಶ್ರೀರಾಮಪಾದುಕೆ!
ಗುರುಗಳ,ಮಠಮಾನ್ಯರ ಶ್ರೇಷ್ಟರ ಪಾದುಕಾ ಪೂಜೆ ಆಧ್ಯಾತ್ಮದ ಆತ್ಮ.
ಬ್ರಾಹ್ಮಣ ಸಂಪ್ರದಾಯದಲ್ಲಿ ತಿಥಿ-ಶ್ರಾದ್ಧ ಕಮ೯ಗಳಲ್ಲಿ-ಕಾಲು ತೊಳೆಯುವ (ಪೂವ೯ಪಂಗ್ತಿಯ ಜನಕ್ಕೆ ಮೀಸಲು)-ಅದರ ತೀಥ೯ವನ್ನು ಸೇವಿಸುವ ಕಟ್ಟಳೆ-ಕಾಲಿಗೆ/ಕಾಲುಗಳಿಗೆ ಸಂದ/ಸಲ್ಲುವ ಮಹತಿ.
ಕಾಲು ಕೀಳಲ್ಲ ಇದೇ ಇಲ್ಲಿ ಸ್ಪಷ್ಟ.
ಕಣ್ಣು ಶ್ರೇಷ್ಟ ಎನ್ನುವವರಿಗೆ ಮತ್ತಷ್ಟು ಸವಾಲುಗಳು-
ಕಣ್ಣುರಿ,ಕೆಂಗಣ್ಣು,ಕಾಮಾಲೆ ಕಣ್ಣು,ಕ್ರೂರದೃಷ್ಟಿ,ವಕ್ರದೃಷ್ಟಿ,ಕಾಕದೃಷ್ಟಿ,ಗೃಧ್ರದೃಷ್ಟಿ-ಇಲ್ಲಿ ಹಿರಿಮೆಯೇ ಏನು?
ಕಾಲಿನ ಮಹತಿಗೆ-ಓಟ(ರನ್ನಿಂಗ್ ರೇಸ್),ಕಾಲ್ಚೆಂಡು (ಫ಼ುಟ್ ಬಾಲ್)-ಇತ್ಯಾದಿ ಕ್ರೀಡೆಗಳು,
ಈಗೆಲ್ಲಾ ಎಲ್ಲಾ ಹೊಸವಿಷಯಗಳಿಗು-ಓಟದ ಮಾಟ-ಇಲ್ಲಿ ಕಾಲಿಲ್ಲದಿದ್ದರೆ ಏನು ಗತಿ?
ತೊದರೆಗೆ ಹೇಳಿಸಿದ ಗಾದೆ ಮಾತು-“ಕಾಲೆಳೆಯುವುದು!”
ಅಂಗವೈಕಲ್ಯದ ಜನ ಕೈಗೆ ಪಯಾ೯ಯವಾಗಿ ಕಲನ್ನು ಬಳಸುವುದು ಸತ್ಯವಲ್ಲವೇ?
ಇಲ್ಲಿಲ್ಲವೇ ಕಾಲ್ಗುಣ?
ಸೊಸೆಯನ್ನು ಮನೆ ತುಂಬಿಸಿಕೊಂಡಾಗ-ಮನೆಯ ಉದ್ಧಾರಕ್ಕೆ ಸೊಸೆಯ ಕಾಲ್ಗುಣ ಎಂತ ಹಂಬಲಿಸಿ,ಬೆಂಬಲಿಸುವುದಿಲ್ಲವೇ ಕುಟುಂಬ?
ಪರಾತ್ಪರದ ಸೃಷ್ಟಿಯಲ್ಲಿ-ಅನಗತ್ಯ,ಅನಪೇಕ್ಷಿತ,ಅಲಕ್ಷಿತ ಇವಕ್ಕಿವೆಯೇ ಪಾತ್ರ?
ಕಣ್ಣೇನು-ಕಾಲೇನು ಎಲ್ಲ ಸಿದ್ಧ-ಶುದ್ಧ ಅಷ್ಟೇ ಸತ್ಯ.
ಕಣ್ಣನ್ನು ಮಣ್ಣು ಮಡಬೇಡಿ-ಎಂದರೆ ದಾಸ ಶ್ರೇಷ್ಟ ಪುರಂದರರ ಅಳಲು-
“ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪಗಳಿರಾ!”-ಎಂಬುದು ಟೊಳ್ಳೆ?
ಭಾಗ್ಯದ ಲಕ್ಶ್ಮೀ ಬಾರಮ್ಮ ಗೆಜ್ಜೆಕಾಲುಗಳ ನಾದವ ಬೀರುತ್ತಾ-
ಕಾಲೇ ಇಲ್ಲದಿದ್ದರೆ, ಕಾಲಿಗೆ ಮಹತ್ವ ಇಲ್ಲದಿದ್ದರೆ-ಇನ್ನೆಲ್ಲಿ ಗೆಜ್ಜೆ,ನಾದ,ನಡೆಯುವುದು?
ಪರಾತ್ಪರದ ವೈಭವಕ್ಕೆ ಬಂದರೆ-
“ಮಧುರಾಧಿಪತೇಃ ಅಖಿಲಂ ಮಧುರಂ-ಎಂಬಲ್ಲಿ ಗಮನಂ ಮಧುರಂ”-
ಈ ಗಮನಕ್ಕೆ-ಕಾಲು ಗಮನಾಹ೯ವಲ್ಲವೇ?
ಒಟ್ಟಿನಲ್ಲಿ ದಾನ-ಉಪನಿಷತ್ತು ಹೇಳುತ್ತದೆ-
“ಭಿಯಾ ದಾನಂ, ಹ್ರಿಯಾ ದಾನಂ, ಸಂವಿದಾ ದಾನಂ”-
ಸಾರಾಂಶದಲ್ಲಿ-
ಭಯದಿಂದ (ಭೀರುತನ) ದಾನಮಾಡು,
ಪ್ರೀತಿಯಿಂದ ದಾನಮಾಡು,
ತಿಳಿದು(ಅರಿವು) ದಾನಮಾಡು ಎಂತ.
ಕಣ್ಣಿರಲಿ-ಕಾಲಿರಲಿ ದಾನಕ್ಕೆ ಮಾನವಿದೆ,ಮನವಿದೆ,ಸಮ್ಮಾನವಿದೆ,ಸಂವೇದನೆಯಿದೆ.
ಇರಲಿ ಓದುಗ ಗಣ,ಓದುಗರ ಗುಣ ನಿಧಾ೯ರಕ್ಕೆ ಬರಲಿ,ಅನುಷ್ಟಾನಕ್ಕೆ ಅಂಕುರಾಪ೯ಣ ಮಾಡಲಿ-ಮಾಡಿಸಲಿ-
ಸತ್ಯದಶ೯ನವಗಲಿ-ಆಗಿಸಲ್ಪಡಲಿ-ತಮಸ್ಸು ಕಳೆದು ಹುಮ್ಮಸ್ಸು ಅಯಸ್ಸಲ್ಲಿ ಗಟ್ಟಿಯಗಿ ನೆಲೆ ನಿಲ್ಲಲಿ ನಲ್ಮೆ ಆಗಲಿ.
ಆರ್.ಎಂ.ಶಮ೯
[email protected]

LEAVE A REPLY

Please enter your comment!
Please enter your name here