ಪತ್ರಿಕೋದ್ಯಮಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು

0
287

 
ಉಜಿರೆ ಪ್ರತಿನಿಧಿ ವರದಿ
ನಮ್ಮ ಸಮಾಜ ಲೌಕಿಕವಾಗಿ, ಸಾಮಾಜಿಕವಾಗಿ ಬದಲಾಗುತ್ತಿದೆ. ಹಾಗೆಯೇ ನಮ್ಮ ಸಂಸ್ಕೃತಿಯಂತೆ ಬದಲಾಗಬೇಕು. ರಾಜಕೀಯ, ಧಾರ್ಮಿಕ ಬದುಕು ಹಿಂದಿಗೂ- ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಎಂದು ಮಂಜುವಾಣಿಯ ಸಂಪಾದಕರು ಹಾಗೂ ಶ್ರೀ.ಧ,ಮಂ. ಕಾಲೇಜಿನ ಮಾಜಿ ಪ್ರಾಂಶುಪಾಲರು ಪ್ರೋ|| ಎಸ್. ಪ್ರಭಾಕರ್ ಹೇಳಿದರು.
 
 
ಇತ್ತೀಚೆಗೆ ಉಜಿರೆ ಶ್ರೀ.ಧ.ಮಂ. ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಸೃಜನ ವಿಕಸನಕ್ಕೊಂದು ವೇದಿಕೆಯಲ್ಲಿ ಪತ್ರಿಕೋದ್ಯಮ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಹೇಳಿದರು.
 
 
ವಾಚಕರಿದ್ದರೆ ಮಾತ್ರ ಒಂದು ಪ್ರಬುದ್ದ ಪತ್ರಿಕೆ ಹೊರಬರಲು ಸಾಧ್ಯ ಪತರಿಕೆ ಓದುವ ಅಭ್ಯಾಸ ಇದ್ದರೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತದೆ. ಪತ್ರಿಕೆ ಒಂದು ಸಂಗಾತಿಯಾಗಬೇಕು, ಅದು ದ್ವೇಷಿಯಾಗಬಾರದು, ಎಂದು ತಿಳಿಸಿದರು.
 
 
ಕೇರಳದಲ್ಲಿ ಪೂರ್ತಿ ಅಕ್ಷರಸ್ಥರೆ ಇದ್ದಾರೆ, ಅಲ್ಲಿನ ಪತ್ರಿಕೆ ಎಲ್ಲ ಓದುಗರನ್ನು ಸೆಳೆಯುತ್ತದೆ. ಪತ್ರಿಕೆಗಳು ಇಂದು ಜಗತ್ ವ್ಯಾಪಿಯಾಗಿ ಪ್ರಸಾರಗೊಳ್ಳುತ್ತಿದೆ. ಅನೇಕ ವಿಚಾರಗಳಿಗೆ ಪತ್ರಿಕೆ ಒಂದು ಮದ್ಯಸ್ಥಿಕೆ ವಹಿಸುತ್ತಿದೆ. ವಿಚಾರಧಾರೆಯ ಕೂಟ ಪತ್ರಿಕೆ ಎಂದು ನುಡಿದರು.
 
 
ಜನರನ್ನು ಎದ್ದೇಳಿಸಬೇಕು, ಯಾವುದೆಂದರೆ ಯಾವುದನ್ನು ಹಾಗೆಯೇ ಹಾಕಲು ಸಾಧ್ಯವಿಲ್ಲ, ಜನರಿಗೆ ಧೈರ್ಯ ಮೂಡಿಸುವಂತಹ ಕಾರ್ಯ ಮಾಡಬೇಕು, ಪತ್ರಿಕೋದ್ಯಮಗಳ ಜವಾಬ್ದಾರಿ ಆಗ ಅದನ್ನು ಮರೆಯಬಾರದು ಎಚ್ಚೆತ್ತುಕೊಳ್ಳಬೇಕು ಎಂದರು.
 
 
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ|| ಮೋಹನ್ ನಾರಾಯಣ ಉಪಸ್ಥಿತರಿದ್ದು, ಸ್ವಸ್ತಿಕಾ ಹಾಗೂ ಅಸ್ರತ್ ನಿರೂಪಿಸಿ, ವಿಭಾಗದ ಮುಖ್ಯಸ್ಥ ಪ್ರೋ|| ಭಾಸ್ಕರ್ ಹೆಗ್ಡೆ ಸ್ವಾಗತಿಸಿ, ಕವನ ವಂದಿಸಿದರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here