ಪತ್ರಿಕೆಗಳ ಏಕ ಮುಖ ಸುದ್ದಿ, ಹಿರಿಯ ಪತ್ರಕರ್ತ ವಿಷಾದ

0
141

ವರದಿ: ಸುಕೃತಾ
ಚಿತ್ರ: ಕೃಷ್ಣಪ್ರಶಾಂತ್.ವಿ
ಪ್ರಸ್ತುತ ಪತ್ರಿಕೋದ್ಯಮದಲ್ಲಿ ಏಕ ಮುಖ ಸುದ್ದಿಗಳು ಪ್ರಕಟಗೊಳ್ಳುತ್ತಿದೆ. ಆದರೆ ಪತ್ರಿಕೆಗಳಲ್ಲಿ ಸುದ್ದಿಯ ಎಲ್ಲಾ ಆಯಾಮವನ್ನೂ ಜನರಿಗೆ ತಲುಪಿಸುವಂತಾಗಬೇಕು ಎಂದು ಹಿರಿಯ ಪತ್ರಕರ್ತ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಹೇಳಿದರು.
 
 
ಗುರುವಾರದಂದು ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಎರ್ಪಡಿಸಿದ್ದ ‘ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
 
ಎಲ್ಲಾ ಪತ್ರಿಕೆಗಳ ಪುರವಣಿಗಳು ಹೆಚ್ಚಿನ ಮಾಹಿತಿಯೊಂದಿಗೆ ವಿಜ್ಞಾನ, ಕಲೆ, ಸಾಹಿತ್ಯ, ವಾಣಿಜ್ಯ, ಸಂಸ್ಕೃತಿ ಹೀಗೆ ಎಲ್ಲಾ ರಂಗಗಳ ವಿಚಾರಗಳನ್ನು ಓದುಗರಿಗೆ ತಲುಪಿಸುತ್ತದೆ. ಇದೇ ಪತ್ರಿಕೆಯ ಸಾಧ್ಯತೆಯಾಗಿದೆ ಎಂದರು.
 
ಪುರವಣಿ ವಿದ್ಯಾರ್ಥಿಗಳಿಗಾಗಿ ಗಣನೀಯ ಸ್ಥಳವನ್ನು ಮೀಸಲಿಡುತ್ತದೆ. ವಿದ್ಯಾರ್ಥಿಗಳು ಈ ಪುರವಣಿಯನ್ನು ತಮ್ಮ ಬರವಣಿಗೆಯ ಮೂಲಕ ಹೆಚ್ಚು ಬಳಸಿಕೊಳ್ಳಬಹುದು. ಇಂತಹ ಮೀಸಲಿಟ್ಟ ಜಾಗಗಳನ್ನು ಬಳಸಿಕೊಂಡರೆ ವೃತ್ತಿ ಜೀವನದಲ್ಲೂ ಸಹಕಾರಿಯಾಗುತ್ತದೆ ಎಂದು ಕಿವಿ ಮಾತು ಹೇಳಿದರು.
 
ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಮೊದಲ ಸ್ಥಾನಗಳಿಸಿದವರು ಹಲವರು ಪತ್ರಿಕೆಗಳನ್ನು ಓದಿಯೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೋಬ್ಬರು ಪತ್ರಿಕೆ ಓದುವುದನ್ನು ಹವ್ಯಾಸವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅಂಜಲಿ ಸ್ವಾಗತಿಸಿದರು. ವಿದ್ಯಾರ್ಥಿ ಚೈತನ್ಯ ವಂದಿಸಿದರು.

LEAVE A REPLY

Please enter your comment!
Please enter your name here