ಪತ್ರಡೆ

0
239

* ಸುಮತಿ ಕೆ.ಸಿ.ಭಟ್ ಆದೂರು 
ಬೇಕಾಗುವ  ಸಾಮಾಗ್ರಿಗಳು:
ಕಣಿಲೆ ತುಂಡು 1/2 ಕೆ.ಜಿ., ಕುಚ್ಚಲಕ್ಕಿ 1/4 ಕೆ.ಜಿ. , ಬೆಳ್ತಿಗೆ ಅಕ್ಕಿ 1/4ಕೆ.ಜಿ., ಉಪ್ಪು, ಕೊತ್ತಂಬರಿ 2 ಚಮಚ, ಜೀರಿಗೆ 1/2 ಚಮಚ, ಜೀರಿಗೆ 1/2ಚಮಚ, ಹುಳಿ ನೆಲ್ಲಿಕಾಯಿ ಗಾತ್ರ, ಒಣಮೆಣಸು 6, ಅರಸಿನ ಹುಡಿ.
 
ಮಾಡುವ ವಿಧಾನ:
ಕಣಿಲೆಯನ್ನು ತುರಿದು ಮುನ್ನಾದಿನವೇ ನೀರಿನಲ್ಲಿ ಹಾಕಿಡಿ. ಮೂರ್ನಾಲ್ಕು ಬಾರಿ ನೀರು ಬದಲಾಯಿಸಿ. ನೆನೆಯಿಸಿದ ಎರಡೂ ರೀತಿಯ ಅಕ್ಕಿಯನ್ನು ತೊಳೆದು, ಉಪ್ಪು ಕೊತ್ತಂಬರಿ, ಜೀರಿಗೆ, ಹುಳಿ, ಮೆಣಸು, ಅರಸಿನಹುಡಿ ಹಾಕಿ ಸ್ವಲ್ಪವೇ ನೀರು ಹಾಕಿ, ತರತರಿಯಾಗಿ ಗಟ್ಟಿಯಾಗಿ ರುಬ್ಬಿ. ಈ ಹಿಟ್ಟಿಗೆ ತುರಿದಿಟ್ಟ ಕಣಿಲೆಯನ್ನು ನೀರಿನಿಂದ ತೆಗೆದು ಹಾಕಿ ಮಿಶ್ರಮಾಡಿ ದೊಡ್ಡ ಉಂಡೆಗಳನ್ನಾಗಿ ಮಾಡಿ ಹಬೆಯಲ್ಲಿ ಬೇಯಿಸಿ. ಬೆಂದ ಮೇಲೆ ತುಪ್ಪ ಹಾಕಿಯೂ ತಿನ್ನಬಹುದು. ಇಲ್ಲವೇ ಹುಡಿಮಾಡಿ ಬೆಲ್ಲ, ತೆಂಗಿನತುರಿ ಸೇರಿಸಿ ಒಗ್ಗರಣೆ ಹಾಕಿ ತಿನ್ನಬಹುದು. ಇಲ್ಲವೇ ಹುಡಿಮಾಡಿ ನೀರುಳ್ಳಿ ಹಸಿಮೆಣಸು, ಕರಿಬೇವುಹಾಕಿ ಒಗ್ಗರಣೆ ಕೊಟ್ಟು ತಿನ್ನಲು ರುಚಿಯಾಗಿರುತ್ತದೆ.

LEAVE A REPLY

Please enter your comment!
Please enter your name here