ಪತ್ರಕರ್ತರಿಗೆ ವೀಸಾ ವಿಸ್ತರಣೆಗೆ ನಿರಾಕರಣೆ: ಭಾರತದ ವಿರುದ್ಧ ಚೀನಾ ಆಕ್ಷೇಪ

0
237

 
ವರದಿ: ಲೇಖಾ
ಚೀನಾದ ಕ್ಷಿನ್ಹುವಾ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮೂವರು ಪತ್ರಕರ್ತರಿಗೆ ವೀಸಾ ವಿಸ್ತರಿಸಲು ನಿರಾಕರಿಸಿರುವ ಭಾರತದ ಕ್ರಮಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
 
 
ಮೂವರು ಪತ್ರಕರ್ತರಿಗೆ ವೀಸಾ ನಿರಾಕರಿಸಿದ ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾ ಎಚ್ಚರಿಕೆ ನೀಡಿದೆ.
 
 
ಎನ್​ಎಸ್​ಜಿ ಒಕ್ಕೂಟಕ್ಕೆ ಭಾರತದ ಸೇರ್ಪಡೆಗೆ ಚೀನಾ ವಿರೋಧ ವ್ಯಕ್ತಪಡಿಸಿದ್ದರಿಂದ ಇದಕ್ಕೆ ಪ್ರತೀಕಾರವಾಗಿ ಭಾರತ, ಚೀನಾ ಪತ್ರಕರ್ತರಿಗೆ ವೀಸಾ ವಿಸ್ತರಿಸಲು ನಿರಾಕರಿಸುತ್ತಿದೆ ಎಂದು ಚೀನಾ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿವೆ.
 
 
ಯಾವುದೇ ಅಧಿಕೃತ ಕಾರಣ ನೀಡದೆ ಚೀನಾ ಪತ್ರಕರ್ತರಿಗೆ ವೀಸಾ ನಿರಾಕರಿಸುತ್ತಿರುವುದು ಭಾರತ-ಚೀನಾ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗುತ್ತದೆ ಎಂದು ತಿಳಿಸಿದೆ.
 
 
ಕ್ಷಿನ್ಹುವಾ ಸುದ್ದಿ ಸಂಸ್ಥೆಯ ದೆಹಲಿ ಮತ್ತು ಮುಂಬೈನಲ್ಲಿರುವ ಪತ್ರಕರ್ತರಾದ ವು ಕ್ವಿಯಾಂಗ್, ಲು ತಂಗ್ ಮತ್ತು ಶಿ ಯೊಂಗಂಗ್ ಈ ಮೂವರ ವೀಸಾವನ್ನು ನವೀಕರಿಸಲು ಭಾರತ ನಿರಾಕರಿಸಿದ್ದು, ಇವರಿಗೆ ಜುಲೈ 31ರೊಳಗೆ ದೇಶ ತೊರೆಯುವಂತೆ ಭಾರತ ಸರ್ಕಾರ ಸೂಚನೆ ನೀಡಿದೆ. ಪತ್ರಿಕೋದ್ಯಮ ಕಾರ್ಯವ್ಯಾಪ್ತಿಯನ್ನು ಮೀರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಭಾರತ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here