ಪತ್ರಕರ್ತರಿಗೂ ʻಹಸಿವಿದೆʼ…ಮೆಚ್ಚುಗೆಗೆ ಪಾತ್ರವಾಯ್ತು ಶಾಸಕ ಕೋಟ್ಯಾನ್‌ ನಡೆ

0
531
ಶಾಸಕರ ನೇತೃತ್ವದಲ್ಲಿ ಪತ್ರಕರ್ತರಿಗೆ ಕಿಟ್‌ ವಿತರಣೆ


ಮೂಡುಬಿದಿರೆ: ಭೇಷ್… ಮೂಡುಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಅವರ ನಡೆ ನಿಜಕ್ಕೂ ಮೆಚ್ಚತಕ್ಕಂತಹುದು. ಸಮಾಜದ ಅಂಕು ಡೊಂಕುಗಳನ್ನು ಬೊಟ್ಟುಮಾಡಿ ತೋರಿಸುವ, ಸಮಸ್ಯೆಗೆ ದನಿಯಾಗುವ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ಹಸಿವಿದೆ…ಅವರೂ ತೊಂದರೆಯಲ್ಲಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡು ಅವರಿಗೂ ಆಹಾರ ಒದಗಿಸುವ ಕಾರ್ಯಕ್ಕೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಮುಂದಾಗಿದ್ದು ಮೆಚ್ಚತಕ್ಕಂತಹುದು.

ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ನೀಡಿರುವ ಆಹಾರ ಕಿಟ್‌ ಹಸ್ತಾಂತರಿಸಿದ ಪತ್ರಕರ್ತ ಆರ್.ಬಿ.ಜಗದೀಶ್


ಮೂಡುಬಿದಿರೆಯ ತಾಲೂಕಿನಾದ್ಯಂತ ಕರ್ತವ್ಯ ನಿರ್ವಹಿಸುವ ದಿನ ಪತ್ರಿಕೆ, ವಾರಪತ್ರಿಕೆ, ಟಿ.ವಿ. ಮಾಧ್ಯಮಗಳ ವರದಿಗಾರರಿಗೆ ಶುಕ್ರವಾರದಂದು ಆಹಾರದ ಕಿಟ್‌ ವಿತರಿಸಿದರು. ಮೂಡುಬಿದಿರೆಯ ಪ್ರೆಸ್‌ ಕ್ಲಬ್‌ ಪರಿಸರದಲ್ಲಿ ಆಹಾರದ ಕಿಟ್‌ ಶಾಸಕರ ಉಪಸ್ಥಿತಿಯಲ್ಲಿ ವಿತರಣೆಯಾಯಿತು. ಇದೇ ಸಂದರ್ಭ ಕಾರ್ಕಳದ ಉದ್ಯಮಿ ರವೀಂದ್ರ ಶೆಟ್ಟಿ ಕೊಡಮಾಡಿದ ಆಹಾರದ ಕಿಟ್‌ಗಳನ್ನು ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್‌ ಶಾಸಕರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.‌ ಬಿಜೆಪಿ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here