ಪತ್ರಕರ್ತರನ್ನು ಸರಕಾರ ಮೆರೆಯಿತೇ…?

0
752


ಮೂಡುಬಿದಿರೆ: ಸಣ್ಣ ಹುಲ್ಲುಕಡ್ಡಿ ಅಲುಗಾಡಿದರೂ ಮಾಧ್ಯಮದಲ್ಲಿ , ಪತ್ರಿಕೆಯಲ್ಲಿ ಬರಬೇಕೆಂಬ ರಾಜಕಾರಣಿಗಳು, ಸರಕಾರ ಇಂದು ಪತ್ರಕರ್ತರನ್ನು ಮರೆತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್‌ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್‌ ಕೋಟೆ ಎತ್ತಿದ್ದಾರೆ.

ವಾರ್ತೆ.ಕಾಂ ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಗೊಂಡ “ಅರೆಕಾಲಿಕ ಪತ್ರಕರ್ತರ ನೋವು ಅರ್ಥವೇ ಆಗೋದಿಲ್ವೇ?” ಲೇಖನ ಓದಿ ಪ್ರತಿಕ್ರಿಯಿಸಿದ ಅಮರ್‌ ಕೋಟೆ , ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ನೋವಿಗೆ ಪತ್ರಿಕಾ ಮಾಧ್ಯಮದ ಮಾಲೀಕರು, ಸರ್ಕಾರ ಸ್ಪಂದಿಸಲೇ ಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹೀಗೆ ಹಲವು ಕ್ಷೇತ್ರಗಳ ಪ್ರಮುಖರು ಅರೆಕಾಲಿಕ ಪತ್ರಕರ್ತರ ನೋವಿಗೆ ದನಿಯಾಗುವ ಅವಶ್ಯಕತೆಯಿದೆ. ಈ ತನಕ ಪ್ರತಿಯೊಂದು ಕ್ಷೇತ್ರಕ್ಕೂ ಮಾಧ್ಯಮದ ಮೂಲಕ ಬೆಳಕು ಚೆಲ್ಲುವ ಕಾರ್ಯ ಮಾಡಿದ ಮಾಧ್ಯಮದವರ ಸಂಕಷ್ಟಕ್ಕೆ ದನಿಯಾಗುವುದು ಅತ್ಯವಶ್ಯಕವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅರೆಕಾಲಿಕ ಪತ್ರಕರ್ತರು ಮಾಡುವ ಕೆಲಸಕ್ಕೆ ಸರಕಾರ ಗೌರವ ಹಾಗೂ ಆರ್ಥಿಕ ಪ್ರೋತ್ಸಾಹವನ್ನು ನೀಡಬೇಕು ಎಂದು ಅಮರ್‌ ಕೋಟೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here