ಪಡ್ಡ್ಯಾರಬೆಟ್ಟದಲ್ಲಿ ಸಂಭ್ರಮದ ಜಾತ್ರೋತ್ಸವ

0
302

ನಮ್ಮ ಪ್ರತಿನಿಧಿ ವರದಿ
ಶ್ರೀಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ಮೂಲಸ್ಥಾನದಲ್ಲಿ ಮಾ. 14ರಂದು ಜಾತ್ರೋತ್ಸವ ಪ್ರಾರಂಭಗೊಂಡಿತು. ಮೀನ ಸಂಕ್ರಮಣದ ದಿನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರ ಪೂಜೆಯ ನಂತರ ರಾತ್ರಿ 10ಗಂಟೆಗೆ ಪಡ್ಡ್ಯೋಡಿ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕಾಗಮಿಸಿತು .
#padyarabettu#kodamanittaya#perinje#belthangady
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದೊಂದಿ ಬೆಳಕಿನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ದೈವದ ಭಂಡಾರವನ್ನು ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ತದನಂತರ ಕ್ಷೇತ್ರದಲ್ಲಿ ದೇವರ ಬಲಿ ಸೇವೆ, ಧ್ವಜಾರೋಹಣ, ಬಲಿ, ಚೆಂಡು ನಡೆದವು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ರಾಮದಾಸ ಆಸ್ರಣ್ಣ, ಪ್ರಸನ್ನ ಆಸ್ರಣ್ಣ, ಅನುವಂಶೀಯ ಆಡಳಿತದಾರರಾದ ಎ.ಜೀವಂಧರ್ ಕುಮಾರ್ ಮೊದಲಾದವರಿದ್ದರು
#padyarabettu#kodamanittaya#perinje

LEAVE A REPLY

Please enter your comment!
Please enter your name here