ಪಡಿತರ ವಿತರಣೆಗೆ ಕೂಪನ್ ಕಡ್ಡಾಯ

0
418

ಬೆಂಗಳೂರು ಪ್ರತಿನಿಧಿ ವರದಿ
ಪಡಿತರ ವಿತರಣೆಗೆ ಕೂಪನ್ ಕಡ್ಡಾಯವಾಗಿದ್ದು, ತಿಂಗಳಾಂತ್ಯಕ್ಕೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಕೂಪನ್ ನೀಡಲಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
 
 
 
ಬೆಂಗಳೂರಿನಲ್ಲಿ ಪಡಿತರ ವಿತರಣೆ ಬಗ್ಗೆ ಸ್ಪಷ್ಟೀಕರಣ ನೀಡಿದ ಆಹಾರ ಸಚಿವ ಯು.ಟಿ.ಖಾದರ್, ಸದ್ಯಕ್ಕೆ ಈ ನಿಯಮ ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕೂಪನ್ ವಿತರಣೆಗೆ ಮೊಬೈಲ್ ಬಳಕೆ ಮಾಡಲಾಗುತ್ತದೆ. ಆ್ಯಂಡ್ರಾಯ್ಡ್ ಮೊಬೈಲ್ ಗಳ ಮೂಲಕ ಕೂಪನ್ ಗಳ ವಿತರಣೆಯಾಗಲಿದೆ ಎಂದಿದ್ದಾರೆ.
 
 
 
ಹಾಗೆಯೇ ಕಾಲಮಿತಿಯೊಳಗೆ ಎಪಿಎಲ್, ಬಿಪಿಎಲ್ ಕಾರ್ಡ್ ವಿತರಣೆಯೂ ಆಗುತ್ತದೆ. ಇನ್ಮುಂದೆ ಸಕಾಲ ಯೋಜನೆಯಡಿ ಪಡಿತರ ಕಾರ್ಡ್ ವಿತರಣೆಯಾಗಲಿದೆ. ಅರ್ಜಿ ಹಾಕಿದ 1 ವಾರದೊಳಗೆ ರೇಷನ್ ಕಾರ್ಡ್ ವಿತರಣೆಯಾಗಲಿದೆ.
 
 
 
ಗ್ರಾ.ಪಂ. ಅಕೌಂಟೆಂಟ್ ಗೆ ಕಾರ್ಡ್ ಮಂಜೂರು ಮಾಡುವ ಅಧಿಕಾರ ನೀಡಲಾಗಿದೆ. ಆನ್ ಲೈನ್ ನಲ್ಲೇ ಎಪಿಎಲ್ ಕಾರ್ಡ್ ಡೌನ್ ಲೋಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 3 ತಿಂಗಳೊಳಗೆ ರೇಷನ್ ಕಾರ್ಡ್ ವಿತರಣೆಗೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಸೀಮೆ ಎಣ್ಣೆ ಬೇಕಾಗಿರುವ ಗ್ರಾಹಕರಿಗೆ ನೋಂದಣಿ ಕಡ್ಡಾಯವಾಗಿದೆ ಎಂದು ಆಹಾರ ಸಚಿವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here