ಪಟಾಕಿ ನಿಷೇಧ

0
303

 
ರಾಷ್ಟ್ರೀಯ ಪ್ರತಿನಿಧಿ ವರದಿ
ಹೈಕೋರ್ಟ್ ಶಬ್ದ ಮಾಡುವ ಪಟಾಕಿಯನ್ನು ನಿಷೇಧಿಸುವಂತೆ ಸೂಚಿಸಿದೆ. ರಾತ್ರಿಯ ವೇಳೆ ಶಬ್ದ ಮಾಡುವ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ. ಯಾವುದೇ ಸಂದರ್ಭವದರೂ ಸರಿ ಪಟಾಕಿಯನ್ನು ನಿಷೇಧಿಸಿ ಎಂದು ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ.
 
 
ಯು ಪಿ ನಲ್ಲೂ ಪಟಾಕಿ ಬ್ಯಾನ್
ಕೇರಳದ ಕೊಲ್ಲಂ ಜಿಲ್ಲೆಯ ಪುತ್ತಿಂಗಾಲ್ ನ ಭದ್ರಕಾಳಿ ದೇಗುಲದ ವಾರ್ಷಿಕೋತ್ಸವದ ವೇಳೆ ಸಂಭವಿಸಿದ ಪಟಾಕಿ ಸ್ಫೋಟ ದುರಂತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವೂ ಸಹ ಪಟಾಕಿ ನಿಷೇಧಿಸಿದೆ.
 
ಲಖನೌನಲ್ಲಿ ಪಟಾಕಿ ನಿಷೇಧಿಸಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ಲಖನೌದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಪಟಾಕಿ ನಿಷೇಧಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೂಚಿಸಿದ್ದಾರೆ.
 
 
ಕಳೆದ ವಾರ ಕೇರಳದ ಕೊಲ್ಲಂ ಜಿಲ್ಲೆಯ ಪುತ್ತಿಂಗಾಲ್ ನ ಭದ್ರಕಾಳಿ ದೇಗುಲದ ವಾರ್ಷಿಕೋತ್ಸವದ ವೇಳೆ ಸಂಭವಿಸಿದ ಘೋರ ಪಟಾಕಿ ಸ್ಫೋಟದಿಂದ ಉಂಟಾದ ಅಗ್ನಿ ದುರಂತದಲ್ಲಿ 112 ಮಂದಿ ಸಾವಿಗೀಡಾಗಿ, 350ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಟನ್ ಗಟ್ಟಲೆ ಪಟಾಕಿ ಶೇಖರಣೆಯಾಗಿದ್ದ ಗೋದಾಮಿಗೆ ಬೆಂಕಿ ತಗುಲಿ ಅವುಗಳು ಸ್ಫೋಟಗೊಂಡ ಪರಿಣಾಮ ದೇವಾಲಯದ ಸುತ್ತಮುತ್ತಲಿನ ಸುಮಾರು 500 ಮನೆಗಳು ಬಹುತೇಕ ಹಾನಿಗೀಡಾಗಿದ್ದವು.

LEAVE A REPLY

Please enter your comment!
Please enter your name here