ಪಂ. ಪುಟ್ಟರಾಜ ಗವಾಯಿ ಸ್ಮಾರಕ ಭವನಕ್ಕೆ 10ಕೋಟಿ ರೂ. ಅನುದಾನ:ಸಚಿವ ಎಚ್ ಕೆ ಪಾಟೀಲ್

0
402

ನಮ್ಮ ಪ್ರತಿನಿಧಿ ವರದಿ
ಗದಗ ದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಯಾತ್ರಿನಿವಾಸದ ಮೊದಲಮಹಡಿಯ ಕಟ್ಟಡ ಕಾಮಗಾರಿಗೆ ಸಚಿವರಾದ ಎಚ್ ಕೆ ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು.
 
 
 
ಪ್ರವಾಸೋದ್ಯಮ ಇಲಾಖೆ ಯಾತ್ರಿ ನಿವಾಸದ ನಿರ್ಮಾಣಕ್ಕೆ 50 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡಿದ್ದು ಜುಲೈ ಅಂತ್ಯಕ್ಕೆ ಕಾಮಗಾರಿ ಪೂಣ೯ಗೊಳಿಸಲು ಸಚಿವರು ಸೂಚಿಸಿದರು.ರಾಜ್ಯ ಸಕಾ೯ರ ಪಂ.ಪುಟ್ಟರಾಜ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯಕ್ಕೆ 10 ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ತಿಳಿಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 5ಕೋಟಿ ರೂ. ಅನುದಾನದಲ್ಲಿ ನಿಮಾ೯ಣವಾಗುತ್ತಿರುವ ಪಂ.ಪುಟ್ಟರಾಜ ಗವಾಯಿಗಳ ಸ್ಮಾರಕ ಭವನದ ಕಾಮಗಾರಿಯನ್ನು ವೀಕ್ಷಿಸಿದರು.
 
 
 
ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಸಮಾರಂಭದ ಸಾನಿಧ್ಯ ವಹಿಸಿದ್ದರು.ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಜಿ.ಪಂ.ಸದಸ್ಯ ಸಿದ್ದು ಪಾಟೀಲ, ನಗರ ಸಭೆ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಸದಸ್ಯರುಗಳಾದ ಶಿವಲೀಲಾ ಅಕ್ಕಿ, ಬಿ.ಜಿ.ಅಸೂಟಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದೇ೯ಶಕ ಶರಣು ಗೋಗೇರಿ, ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಅಲ್ಲದೇ ಗುರಣ್ಣ ಬಳಗಾನೂರ, ಪ್ರಭಣ್ಣ ಹುಣಸಿಕಟ್ಟಿ, ನಿಂಗಯ್ಯ ಕೆಂಗಾರ, ಫಾರೂಕ ಸೇರಿದಂತೆ ಇತರ ಗಣ್ಯರು, ಗುರುಹಿರಿಯರು ಉಪಸ್ಥಿತರಿದ್ದರು. ತದನಂತರ ಬೆಟಗೇರಿ ನರಸಾಪೂರದಲ್ಲಿನ ನೇಕಾರ ಕಾಲನಿಯಲ್ಲಿ ಒಂದು ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿಮಾ೯ಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಕನಾ೯ಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುಗಿ೯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here