ಪಂಡಿತಾಃ ಸಮದಶಿ೯ನಃ!

0
295

 
ಮಸೂರ ಅಂಕಣ: ಆರ್ ಎಂ ಶರ್ಮ
ಪರಾತ್ಪರದ ಬಿಚ್ಚುಮನಸ್ಸಿನ ಸಂದೇಶ-
“ವಿದ್ಯಾ ವಿನಯ ಸಂಪನ್ನೇ———–
—————- ಶುನಿ ಚೈವ—
ಶ್ವಪಾಕೇ ಚ——————–
ಪಂಡಿತಾಃ ಸಮದಶಿ೯ನಃ———-!”
ಪಂಡಿತರು-ತಿಳಿದವರು, ತಿಳಿಹೇಳುವವರು-ಜಗತ್ತಿಗೆ ಮಾಗ೯ದಶ೯ಕರು ನಾಯಿಯಲ್ಲಿಯೂ ಪರಮಾತ್ಮನನ್ನು-ಸವ೯ಸಮನನ್ನು-ಸವ೯ಮಾನ್ಯನನ್ನು-ಅನನ್ಯನನ್ನು ಕಾಣುವುದೇ-ಕಾಣಿಸುವುದೇ -ಸಮತೆಯ-ಸವ೯ಸಮಾನತೆಯ ದಶ೯ನವು!
ಅಲ್ಲಿಗೆ ನಾಯಿಗೂ-ನಾಯಕನಿಗೂ-ಒಂದೇ ನ್ಯಾಯ-ಮತ್ತೆಲ್ಲಿ ಮತ್ತೆಕೆ ಅನ್ಯಾಯ?
ಈಗ ಕಳೆದ ಕೆಲ ದಿನಗಳಿಂದಲೂ ನಾಯಿ ಕೊಲೆ ದೇಶದ ಉದ್ದಗಲಕ್ಕೆ ಚಚಾ೯ವಸ್ತು.
ದೆಹಲಿಯಲ್ಲಿ-ದೇಶದ ರಾಜಧಾನಿಯಲ್ಲಿ-ಹಾಡಹಗಲಿನಲ್ಲಿ-ಜನ ನಿಬಿಡ ಜಾಗ ಮೆತ್ರೋ ರೈಲಿನ ಪರಿಸರದಲ್ಲಿ ಸರಸರ ನಾಯಿಗಳ-“ಪಪ್ಪೀಸ್”-ಮಾರಣ ಹೋಮ-ಹನನ ಅವ್ಯಾಹತವಗಿ ನಡೆಯುತ್ತಿದ್ದು-ದಾಖಲಿಸಲ್ಪಟ್ಟು-ಹಂತಕನ ಬಂಧನವಿಲ್ಲದೇ ಜನ-ಜಾನುವಾರು ಎಲ್ಲಾ ಕಂಗಾಲು ಎಂಬ ಸುದ್ದಿಯೇ ರಷ್ಟ್ರೀಯ ಸುದ್ದಿ.
೨೪ ಘಂಟೆಗಳ ಬಿಸಿ-ಘಾಸಿಯ ಸುದ್ದಿ.
ಇದಕ್ಕೆ ಮಕುಟವಿದ್ದಂತೆ-ಬೆಂಗಳುರಿನಲ್ಲಿ ಮಹಿಳಾಮಣಿಯೊಬ್ಬರು ತಮಗೆ-ತಮ್ಮವಾಸದ ಜಾಗದಲ್ಲಿ-ಮನೆಗೆ ನಾಯಿಕಾಟ ಎಂಬ ಮುಜುಗರಕ್ಕೆ ನಾಯಿಮರಿಗಳ ಸಂಪೂಣ೯ನಿನಾ೯ಮಕ್ಕೆ ಹರಿಕರಳಾಗಿ ಕಾಣಿಸಿಕೊಂಡಿದ್ದಾರೆ-ಇದು ಕಳೆದ ಎರಡು ದಿನಗಳಿಂದ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸುದ್ದಿ.
೧೨೮ಕೋಟಿ ಜನದ ನಡಿಗೆ ಸುದ್ದಿಗೆ ಬರವೇ?
ನಾಯಿ ಸುದ್ದಿ-ಹಿಮಲಯದ ಎತ್ತರಕ್ಕೆ!
ಏಕೆ?
ಈಗ್ಯೆ ಕೆಲತಿಂಗಳುಗಳ ಹಿಂದೆ-ಕೇರಳದಲ್ಲಿ-ದೆವರ ನಾಡು-ರಸ್ತೆ ನಾಯಿ -ಉಪಟಳ-ಬೆಸತ್ತ ಜನ-ತಾವೇ ತಮ್ಮ ಯೋಗಕ್ಷೇಮಕ್ಕೆ ಸಹಕಾರಿಯಾಗಲು ನಾಯಿಗಳ ಸಾಮೂಹಿಕ-
“ದಫ಼ನ-ಭೂಮಿಯಲ್ಲ್ ಗುಂಡಿ ತೋಡಿ-ಮಣ್ಣು ಮಾಡಿದ-ಮಾಡಿಸಿದ ಸುದ್ದಿ ಆಗಿ ಸತ್ತಿತು.
ನಾಯಿಗೆ ನ್ಯಾಯವಿಲ್ಲ ಎಂತ ನಾಯಿ ಪ್ರೇಮಿಗಳು-ನಾಯಿಚಿಂತಕರು-ನಾಯಕರಲ್ಲದಿದ್ದರೂ-ಪ್ರಾಣಿ ದಯಾ ಸಂಘ ಎಂತ ತಮ್ಮ ಅಳಲನ್ನು ತೋಡಿಕೊಂಡರು.
ಅಳಲು-ಒಲವಾಗಲಿಲ್ಲ-ಒಡವೆಯಾಗಲಿಲ್ಲ-ಬದವಾಯಿತು-ಬದವಾಗಿಸಿತು-ಅದರೂ ಬಡಬಡಿಸಿತು-ನಾಯಿಯೊಂದಿಗೆ ಭೂಮಿಯ ಅಡಿಯಲ್ಲಿ ಬೆಚ್ಚಗೆ-ಸಪ್ಪಗೆ-ತೆಪ್ಪಗೆ ಮಲಗಿತು ಸತ್ತಿತು.
ಅಲ್ಲಿಗೆ-“ಶ್ವಾನ ಪುರಾಣ-ಸ್ನ್ಮಶಾನ ಪುರಾಣವೂ ಆಯಿತು!”
ಸಮತೆ-ಪಂಡಿತರ ಸಮದಶ೯ನ-ಸಾವು ಸವ೯ಸಮಾನತೆಯ ಶ್ರೇಷ್ಟ ನಿದಶ೯ನ ಎಂತ ಬಿಂಬಿಸಿತು.
ಈ ದಿನ ತರಿಕು ೨೨ನೇಮಾಚ್೯೨೦೧೬ ರ ಮಂಗಳೂರು ಅವೃತ್ತಿಯ ಡೆಕ್ಕನ್ ಹೆರಾಲ್ಡ್ ನಲ್ಲಿ ಸಂಪಾದಕೀಯ-“ಕಿಲ್ಲಿಂಗ್ ಆಫ಼್ ಡಾಗ್ಸ್”- ಎಂಬ ಶೀಶಿ೯ಕೆಯಲ್ಲಿ ಪ್ರಕಟಿತ-
ಅದರ ಸಾರ ಸಾಮೂಹಿಕ ನಾಯಿ ವಧೆ-ಸಲ್ಲ-ಅಕ್ಷಮ್ಯ ಅಪರಾಧ ಎಂಬ ಭರತವಾಕ್ಯ.
ಭಾರತಕ್ಕೆ-ಭರದಲ್ಲಿರುವ-“ಏಕ ಭಾರತ-ಶ್ರೇಷ್ಟ ಭಾರತಕ್ಕೆ ಇದು ಕಣ೯ಭಾರವೇ-ಕಣಾ೯ಭರಣವೇ!-ತೀಮಾನಿಸುವವರು ಯಾರು-ಅವರೆಲ್ಲಿದ್ದಾರೆ ಬನ್ನಿ ನೋಡೋಣ ಸಿಕ್ಕಿದರೆ ಕೇಳೋಣ!
ಇಂಗ್ಲಿಶ್ ಗಾದೆ ಮಾತು-“ಎವೆರಿ ಡಾಗ್ ಹಾಸ್ ಇಟ್ಸ್ ಡೇ!”-
ಅಂದರೆ ಪ್ರತಿ ನಾಯಿಗೂ ಅದರ ಸುವಣ೯ ದಿನವಿದೆ ಎಂತ.
ಸುವಣ೯ ನಿವ೯ಣ೯-ನಿವಾ೯ಣ ಎಲ್ಲಾ ಸಂಭ್ರಮವೇ-ಸಂಭವವೇ-ದುಭ೯ರವೇ -ಎಂದರೆ-“ನಾಯಿ ಪಾಡು-ಹಾಡೂ ಆಗಲಿಲ್ಲ-ಹಸೆಯೂ ಆಗಲಿಲ್ಲ-ಲೇಸೂ ಆಗಲಿಲ್ಲ-
ಒಟ್ಟಿನಲ್ಲಿ ಆಯಿತು “ಲಾಸು೧”
ಪಂಡಿತರಿಲ್ಲವೇ?
ಪಾಂಡಿತ್ಯವಿಲ್ಲವೇ?
ಸಮದಶ೯ನ-ಯಮದಶ೯ನವೇ?
ಯಮ-ಕಾಲ-ಸವ೯ಭಂಜಕ-ಸವ೯ಭುಂಜಕ-ವಿಶ್ವರೂಪಿಯ ಅಪರವತಾರ.
ಪ್ರಾಣಿ-ನಿತ್ರಾಣಿ.
ಮಹಾ ಪ್ರಾಣಿ ಮಾನವ ಜಾತಿ-ಮೇಲು-ಮತ್ತೆಲ್ಲ ಕೀಳು.
ಬದುಕುವ ಹಕ್ಕು ತನಗೆ,ಕೊಲ್ಲುವ ಹಕ್ಕು ತನ್ನದು-ಇದೇ ಸೃಷ್ಟಿಯ ಸನ್ನದು-ಸನ್ನಿಧಿ-ನಿಧಿ.
“ಇದೆಂತಹ ವಿಧಿ?”
ನಾವು ನಿತ್ಯ ನಮ್ಮ ಅನುಷ್ಟನಾದಲ್ಲಿ ಪಠಿಸುವ ಶ್ರೀ ಪುರುಷಸೂಕ್ತದ ಕೊನೆಗೆ ಬರುವ ಶಾಂತಿಪಠ-
“ಶಂ ನೋ ಅಸ್ತು ದ್ವಿಪದೇ
ಶಂ ಚತುಷ್ಪದೇ!” ಎಂತ.
ಅದರ ಕನ್ನಡದ ಅಥ೯-
ದ್ವಿಪಾದಿಗಳಿಗೂ,ಚತುಷ್ಪಾದಿಗಳಿಗೂ ಯವಾಗಳು ಮಂಗಳವೇ ಇರಲಿ.
ಈ ಮಂಗಳದ ಅಥ೯ ಶಾಂತಿ,ಸುಖ,ನೆಮ್ಮದಿ ಯಲ್ಲವೇ?
ಚತುಷ್ಪಾದಿಯಾದ ನಾಯಿಗೆ ಎಲ್ಲಿದೆ ಶಾಂತಿ-ಬದುಕಿನಲ್ಲಿ ಇಲ್ಲ-ಸತ್ತಮೇಲೆ ಬೇಕೇನು ಶಾಂತಿ?
ಓದುಗರು,ಚಿಂತಕರು ,ಪ್ರಾಣಿ ಹಿತೈಷಿಗಳು,ಪ್ರಾಣಿಪಾಲಕರು,ಪ್ರಾಣಿಪೋಷಕರು-
ತಲೆ ಹಚ್ಚಿ,ತಲೆಚಚ್ಚಿ-ಚಚಿ೯ಸಲಿ.
ನವನೀತ-ನವನೀತಿ-“ನವ್ಯೇತಿ-ನಾನ್ಯೇತಿ ಎಂತಾಗಲಿ!”
ನಾಯಿಗೂ ನ್ಯಾಯ-ನಾಯಕನಿಗೂ ನ್ಯಾಯ ಅದೇ ಈಗಿನ ಅಗತ್ಯವು.
ವ್ರತಮಾಲೆಯ ಅನೇಕ ಸನ್ನಿವೇಶಗಳಲ್ಲಿ-ಮಾನ್ಯ ಸೂತ ಪುರಾಣಿಕರು-ಶೌನಕಾದಿ ಮಹಷಿ೯ಗಳಿಗೆ ವ್ರತ ಸಂಭಂಧಿ ಕಥೆ ಹೇಳಿದರು ಎಂಬುದು ಪ್ರಸ್ತುತ.
“ಶುನಕನ ಬಗೆಗೆ ಬೇಡವೇ ಕಾಳಜಿ?”
ಇನ್ನದರೂ ಶುನಕ-ಬೆನಕ-ಕನಕ-ಆಗಲೀ ಆಗದಿರಲಿ.
ಖಂಡಿತವಾಗಿಯೂ ಕುಹಕ ಆಗುವುದು ಬೇಡ.
೧೨೮ ಕೋತಿ ಜನತೆಗೆ ನಯಿ ಪ್ರೀತಿ-ನೀತಿ-ನಿಯತ್ತಾಗಲಿ-ನಿವೃತ್ತಿಯಾಗುವುದು ಬೇಡಾ!
ಇನ್ನು ಶ್ವಾನ ಸಂಹಾರ ಬೇಡ-ಅದರ ಸಂಸಾರ-ಸರವಾಗಿ ಸರಾಗವಾಗಿ ಇರಲಿ-ಇರಿಸಲ್ಪಡಲಿ.
ಸಮತೆ-ಸಮಾನತೆ-ಈಕ್ವಾಲಿಟಿ-ಕ್ವಾಲಿಟಿಯಾಗಲಿ-ಖೊಟ್ಟೆಯಾಗದಿರಲಿ.
ಭಾರತಕ್ಕೆ ಪ್ರಾಣಿ ಭಾರವೇ-ಭಯವೇ-ಭ್ರಮೆಯೇ?
“ಯತ್ ಕರೋಷಿ ತತ್ ಸವ೯ಂ ಮೇ ಸಮಪ೯ಯ!”
ಇದೇ ಭಗವಂತನ ಆದೇಶ-ಸಂದೇಶ ದೇಶಕ್ಕೆ-ಬೇಡ ಸಂದೇಹ!
 
ಆರ್.ಎಮ್.ಶರ್ಮ,  ಮಂಗಳೂರು
[email protected]

LEAVE A REPLY

Please enter your comment!
Please enter your name here