ಪಂಜೆಮಂಗೇಶರಾಯ ಸಾಹಿತ್ಯದಿಂದ ಸಹಿಷ್ಣುತೆಯ ಸಂದೇಶ

0
496

ವರದಿ: ವಿನಿಷ ಉಜಿರೆ
ಶಿಶುಗೀತೆ, ಭಾವಗೀತೆ, ಕಥಾನಕವನ ಮೂಲಕ ಕನ್ನಡ ಬರಹಕ್ಕೆ ಹೊಸ ತಿರುವು ನೀಡಿದವರು ಪಂಜೆಮಂಗೇಶರಾಯರು. ಮಕ್ಕಳಲ್ಲೂ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸಿದವರು ಎಂದು ಪುತ್ತೂರು ಡಾ. ವರದರಾಜ ಚಂದ್ರಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
 
 
 
21ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ “ಪಂಜೆಮಂಗೇಶರಾವ್ ಕವಿನಮನ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯಕ್ಕೆ ಬೇಕಾದ ಕೊಡುಗೆಗಳನ್ನು ನೀಡಿ ಕನ್ನಡ ಸಾಹಿತ್ಯ ಸಮ್ಮೇಳನದ ಭಿನ್ನ ಪರಂಪರೆ ಪ್ರಾರಂಭಿಸಿದವರು ಪಂಜೆಮಂಗೇಶರಾಯರು ಎಂದರು.
 
 
 
ಪಂಜೆಮಂಗೇಶರಾಯರು ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪನ ವೃತ್ತಿಗೆ ಅರ್ಜಿ ಹಾಕಿದ ಸಂದರ್ಭದಲ್ಲಿ ಕವಿ ಮುದ್ದಣರವರು ಅರ್ಜಿ ಸಲ್ಲಿಸಿದ್ದರು .ಆದರೆ, ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರದ ಆಡಳಿತವಾದ್ದರಿಂದ ಪಂಜೆಮಂಗೇಶರಾಯರಿಗೆ ಇಂಗ್ಲೀಷ್ ಭಾಷೆ ತಿಳಿದ ಕಾರಣ ಅಧ್ಯಾಪಕರಾಗಿ ಕಾರ್ಯನಿರ್ವಹಿಸುವ ಅವಕಾಶ ಬಂದೊದಗಿತ್ತು ಎಂದು ನೆನಪಿಸಿಕೊಂಡರು.
 
 
ಸಣ್ಣಕತೆಯನ್ನು ಜನಪ್ರಿಯಗೊಳಿಸಿದವರು ಪಂಜೆಮಂಗೇಶರಾಯರು. ಅವರು ಓದು ಬರಹ ಬಾರದ ಜನಸಾಮಾನ್ಯರಿಗೆ ತಿಳಿಪಡಿಸುವ ನಿಟ್ಟಿನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ ಅನುವಾದದಲ್ಲೂ ತೊಡಗಿಸಿಕೊಂಡಿದ್ದರು ಎಂದರು.

LEAVE A REPLY

Please enter your comment!
Please enter your name here